ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಂಟಿ ಕ್ರಿಕೆಟ್: ಚಾಹಲ್‌ಗೆ 5 ವಿಕೆಟ್

Published : 10 ಸೆಪ್ಟೆಂಬರ್ 2024, 16:29 IST
Last Updated : 10 ಸೆಪ್ಟೆಂಬರ್ 2024, 16:29 IST
ಫಾಲೋ ಮಾಡಿ
Comments

ನಾರ್ಥಂಪ್ಟನ್: ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ನಾರ್ಥಂಪ್ಟನ್‌ ಶೈರ್ ತಂಡದಲ್ಲಿ ಆಡುತ್ತಿರುವ ಭಾರತದ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದರು.

45 ರನ್‌ಗಳಿಗೆ 5 ವಿಕೆಟ್ ಗಳಿಸಿದ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.  ಈ  ಪಂದ್ಯದಲ್ಲಿ ನಾರ್ಥಂಪ್ಟನ್ ಶೈರ್ ತಂಡವು ಮಂಗಳವಾರ ದಿನದಾಟದ ಕೊನೆಗೆ 232 ರನ್‌ಗಳ ಮುನ್ನಡೆ ಸಾಧಿಸಿದೆ.

ನಾರ್ಥಂಪ್ಟನ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 219 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ಡರ್ಬಿಶೈರ್ ತಂಡವು ಚಾಹಲ್ ಬೌಲಿಂಗ್‌ಗೆ ತತ್ತರಿಸಿತು. 165 ರನ್ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ನಾರ್ಥಂಪ್ಟನ್ ತಂಡವು 46 ಓವರ್‌ಗಳಲ್ಲಿ 5ಕ್ಕೆ178 ರನ್ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT