ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಎಸ್‌ಜಿ ಮೆಂಟರ್‌ ಹುದ್ದೆ: ಜಹೀರ್‌ ಖಾನ್‌ ಮಾತುಕತೆ

Published 22 ಆಗಸ್ಟ್ 2024, 13:59 IST
Last Updated 22 ಆಗಸ್ಟ್ 2024, 13:59 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂದಿನ ಋತುವಿಗೆ ಲಖನೌ ಸೂಪರ್‌ ಜೈಂಟ್ಸ್‌ ಮೆಂಟರ್‌ ಹುದ್ದೆ ಪಡೆಯಲು ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್‌ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದ್ದಾರೆ.

45 ವರ್ಷ ವಯಸ್ಸಿನ ಜಹೀರ್‌ ಮುಂಬೈ ಇಂಡಿಯನ್ಸ್‌ ತಂಡದ ಗ್ಲೋಬಲ್ ಡೆವಲಪ್‌ಮೆಂಟ್‌ ಮುಖ್ಯಸ್ಥರಾಗಿದ್ದರು. ಅದಕ್ಕೂ ಮೊದಲು 2018 ರಿಂದ 2022ರವರೆಗೆ ಫ್ರಾಂಚೈಸಿಯ ಕ್ರಿಕೆಟ್‌ ನಿರ್ದೇಶಕ ಸ್ಥಾನ ವಹಿಸಿಕೊಂಡಿದ್ದರು.

ಆಟಗಾರನಾಗಿ ಜಹೀರ್‌ ಐಪಿಎಲ್‌ನ ಹತ್ತು ಆವೃತ್ತಿಯ ಅವಧಿಯಲ್ಲಿ ಮೂರು ತಂಡಗಳ ಪರ ಒಟ್ಟು ನೂರು ಪಂದ್ಯಗಳನ್ನು ಆಡಿದ್ದಾರೆ. ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಗಳನ್ನು ಅವರು ಪ್ರತಿನಿಧಿಸಿದ್ದಾರೆ. 7.59 ಇಕಾನಮಿ ದರದಲ್ಲಿ 102 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮೆಂಟರ್‌ ಹುದ್ದೆಗಾಗಿ ಜಹೀರ್ ಖಾನ್ ಅವರು ಲಖನೌ ಸೂಪರ್‌ ಜೈಂಟ್ಸ್ ತಂಡದ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಗೌತಮ್‌ ಗಂಭೀರ್‌ ಅವರು ಲಖನೌ ತಂಡ ತೊರೆದ ನಂತರ ಟಿ20 ಕ್ರಿಕೆಟ್‌ ಚೆನ್ನಗಿ ಬಲ್ಲ ಭಾರತ ತಂಡದ ಮಾಜಿ ಆಟಗಾರನೊಬ್ಬನನ್ನು ಕರೆತರಲು ಲಖನೌ ಕೂಡ ಉತ್ಸುಕವಾಗಿದೆ ಎಂದು ಕ್ರಿಕೆಟ್‌ ವೆಬ್‌ಸೈಟ್‌ ಇಎಸ್‌ಪಿಎನ್‌ ವರದಿಮಾಡಿದೆ.

ಗಂಭೀರ್ ಅವರು ಕೋಚ್‌ ಆಗಿದ್ದಾಗ ಎಲ್‌ಎಸ್‌ಜಿ ತಂಡ ಎರಡು ಬಾರಿ (2022 ಮತ್ತು 2023) ಪ್ಲೇ ಆಫ್‌ ತಲುಪಿತ್ತು. ಕಳೆದ ಋತುವಿನಲ್ಲಿ ಅವರು ಎಲ್‌ಎಸ್‌ಜಿ ತೊರೆದು ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಕ್ಕೆ ಮೆಂಟರ್‌ ಆಗಿ ಮರಳಿದ್ದರು. ಕೆಕೆಆರ್‌ ತಂಡ ಕಳೆದ ಋತುವಿನಲ್ಲಿ ಐಪಿಎಲ್‌ ಚಾಂಪಿಯನ್ ಆಗಿತ್ತು.

2017ರಲ್ಲಿ ಜಹೀರ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಪಂಜಾಬ್ ಕಿಂಗ್ಸ್ ಕೂಡ ಟ್ರೆವರ್ ಬೇಯ್ಲಿಸ್‌ ಅವರಿಗೆ ಬದಲಿಯಾಗಿ ಹೆಡ್‌ ಕೋಚ್‌ ಆಗಿ ಭಾರತೀಯ ಆಟಗಾರನೊಬ್ಬನ ನೇಮಕಕ್ಕೆ ಆಸಕ್ತಿ ತೋರಿದೆ. ತಂಡ ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನು ಹೊಂದಲು ಆಸಕ್ತಿ ತೋರಿತ್ತು. ಆದರೆ ಅವರು ಬಿಸಿಸಿಐನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿರುವ ಕಾರಣ ಈಗ ಆ ಸಾಧ್ಯತೆ ದೂರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT