ಭಾರತ ತಂಡದ ತಾರಾ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಬೌಲಿಂಗ್ ಮಾಡಲು ಹೇಳಿಕೊಟ್ಟಿರುವುದು ನಾನು ಎಂದು ಪಾಕಿಸ್ತಾನ ಮೂಲದ ಯುಎಇ ಬೌಲರ್ ಜಹೂರ್ ಖಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಜಹೂರ್ ಖಾನ್ ಎಂಬುವವರು, 2019 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಬೂಮ್ರಾ ಅವರ ಬೌಲಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದಾಗ, ತಾವು ನಿಧಾನಗತಿಯ ಎಸೆತಗಳನ್ನು ಹೇಗೆ ಬೌಲ್ ಮಾಡಬೇಕೆಂದು ಹೇಳಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

2019ರ ಯುಎಇ ಲೆಗ್ನಲ್ಲಿ ನಡೆದ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದಾಗ ಜಹೂರ್, ಬುಮ್ರಾ ಅವರ ಜೊತೆ ಬೌಲಿಂಗ್ ತಂತ್ರದ ಬಗ್ಗೆ ಚರ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬುಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿಸಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಜಹೂರ್ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ. ಅವರು ಉತ್ಪ್ರೇಕ್ಷೆಗಾಗಿಯೂ ಈ ಹೇಳಿಕೆ ನೀಡಿರುವ ಸಾಧ್ಯತೆ ಇದೆ.

‘ನಾನು ನಿಮಗೆ ಒಂದು ಕಥೆ ಹೇಳುತ್ತೇನೆ. ಅದು 2019ರ ಕೊರೊನಾ ಸಂದರ್ಭ. ಯುಎಇನಲ್ಲಿ ಐಪಿಎಲ್ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಬೂಮ್ರಾ ಅವರು ಸಾಮಾನ್ಯ ಆ್ಯಕ್ಷನ್ನೊಂದಿಗೆ ನಿಧಾನಗತಿಯ ಬಾಲ್ಗಳನ್ನು ಹಾಕುತ್ತಿದ್ದರು. ನೆಟ್ಸ್ನಲ್ಲಿ ಬ್ಯಾಟರ್ಗಳು ಅವರ ಬಾಲ್ಗಳನ್ನು ಸರಾಗವಾಗಿ ಎದುರಿಸುತ್ತಿದ್ದರು’ ಎಂದಿದ್ದಾರೆ.

‘ಬಳಿಕ ಮುಂಬೈ ಇಂಡಿಯನ್ಸ್ ತಂಡವು ನನ್ನನ್ನು ನೆಟ್ ಬೌಲರ್ ಆಗಿ ಕರೆಸಿಕೊಂಡಿತು. ನಾನು 6 ದಿನಗಳ ಕಾಲ ಕ್ವಾರಂಟೈನ್ ಮುಗಿಸಿ, 7ನೇ ದಿನ ಅಭ್ಯಾಸಕ್ಕೆ ಇಳಿದೆ. ಆ ದಿನ ರಾತ್ರಿ ಮುಂಬೈ ತಂಡದೊಂದಿಗೆ ಇದ್ದೆ. ಅಂದು ನಾನು ನೆಟ್ಸ್ನಲ್ಲಿ ಮೊದಲ ಎಸೆತವನ್ನು ಯಾರ್ಕರ್ ಹಾಕಿದೆ. ನಂತರದ ಐದು ಎಸೆತಗಳನ್ನು ನಿಧಾನಗತಿಯ ಬಾಲ್ ಮಾಡಿದೆ. ಅದನ್ನು ಬೂಮ್ರಾ, ರೋಹಿತ್ ಶರ್ಮಾ ದಿಟ್ಟಿಸಿ ನೋಡುತ್ತಿದ್ದರು’ ಎಂದಿದ್ದಾರೆ.

‘ನಾನು ಮಾಡಿದ ನಿಧಾನಗತಿಯ ಬೌನ್ಸರ್ಗಳು ಬ್ಯಾಟರ್ಗೆ ಜಡ್ಜ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ನೆಟ್ಸ್ನಲ್ಲಿ ಕುಳಿತಿದ್ದ ಬೂಮ್ರಾ ಅವರು ನಿಮ್ಮಿಂದ ನಿಧಾನಗತಿಯ ಬೌಲಿಂಗ್ ಮಾಡಲು ಹೇಗೆ ಸಾಧ್ಯವಾಯಿತು? ಎಂದು ಕೇಳಿದರು. ಮಾತ್ರವಲ್ಲಿ ಮುಂದಿನ ಅಭ್ಯಾಸದ ಸಂದರ್ಭದಲ್ಲಿ ನೀವು ನನಗೆ ಅದನ್ನು ತಿಳಿಸಿಕೊಡಬೇಕು ಎಂದು ಕೇಳಿದರು. ಆ ಸಂದರ್ಭದಲ್ಲಿ ಮುಂಬೈ ತಂಡಕ್ಕೆ ಶೇನ್ ಬಾಂಡ್ ಬೌಲಿಂಗ್ ತರಬೇತುದಾರರಾಗಿದ್ದರು’ ಎಂದಿದ್ದಾರೆ.

ಬೂಮ್ರಾ ಅವರು ‘ಪಾಜಿ ನೀವು ಬಾಲ್ ಅನ್ನು ಹೇಗೆ ಹಿಡಿಯುತ್ತೀರಿ? ಎಂಬುದನ್ನು ನನಗೆ ತೋರಿಸಿ ಎಂದು ಕೇಳಿದರು. ಆಗ, ನಾನು ಅವರಿಗೆ ನಿಧಾನಗತಿಯ ಬಾಲ್ ಹಾಕುವಾಗ ಹೇಗೆ ಹಿಡಿದುಕೊಳ್ಳಬೇಕು ಎಂದು ತೋರಿಸಿಕೊಟ್ಟೆ. ಈಗ ಅವರು ವಿಶ್ವದರ್ಜೆಯ ಬೌಲರ್ ಆಗಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.