ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ನಿಷೇಧದ ನಡುವೆಯೂ ಆಡಲಿರುವ ಜಿಂಬಾಬ್ವೆ

ಸೆ.1ರಿಂದ ಬಾಂಗ್ಲಾ ಆತಿಥ್ಯದಲ್ಲಿ ತ್ರಿಕೋನ ಟ್ವೆಂಟಿ–20 ಸರಣಿ
Last Updated 9 ಆಗಸ್ಟ್ 2019, 18:49 IST
ಅಕ್ಷರ ಗಾತ್ರ

ಢಾಕಾ: ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿ ಜಿಂಬಾಬ್ಬೆ ತಂಡವು ಆಡಲಿದೆ.

ಈಚೆಗೆ ಜಿಂಬಾಬ್ಬೆ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ನಿಷೇಧಿಸಿತ್ತು. ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಅಲ್ಲಿಯ ಸರ್ಕಾರದ ವಿಪರೀತ ಹಸ್ತಕ್ಷೇಪವನ್ನು ವಿರೋಧಿಸಿದ್ದ ಐಸಿಸಿಯು ಈ ಕ್ರಮ ಕೈಗೊಂಡಿತ್ತು.

‘ಜಿಂಬಾಬ್ಬೆ ಮೇಲೆ ನಿಷೇಧ ಹೇರಿರುವುದು ನಮಗೆ ಅರಿವಿದೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ತಂಡವು ಆಡುವಂತಿಲ್ಲ. ದ್ವಿಪಕ್ಷೀಯ ಸರಣಿಗಳಲ್ಲಿ ಆಡಬಹುದು. ಆದ್ದರಿಂದಲೇ ಈ ಸರಣಿಯಲ್ಲಿ ತಂಡಕ್ಕೆ ಅವಕಾಶ ನೀಡಲಾಗಿದೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಕ್ತಾರ ಜಲಾಲ್ ಯೂನುಸ್ ಹೇಳಿದ್ದಾರೆ. ತ್ರಿಕೋನ ಸರಣಿಯು ಸೆಪ್ಟೆಂಬರ್ 13 ರಿಂದ 24ರವರೆಗೆ ನಡೆಯಲಿದೆ. ಈ ಸರಣಿಯಲ್ಲಿ ಅಫ್ಗಾನಿಸ್ತಾನ ತಂಡವೂ ಆಡುತ್ತಿದೆ.

ಸೆ.5ರಿಂದ 9ರವರೆಗೆ ಬಾಂಗ್ಲಾ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಣ ಚೊಚ್ಚಲ ಟೆಸ್ಟ್ ಪಂದ್ಯವು ಚಿತ್ತಗಾಂಗ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT