ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ-20: ಜಿಂಬಾಬ್ವೆ ವಿರುದ್ಧ ಮಿಂಚಿದ ಜದ್ರಾನ್, ಗೆದ್ದ ಅಫ್ಗಾನಿಸ್ತಾನ

Last Updated 11 ಜೂನ್ 2022, 19:32 IST
ಅಕ್ಷರ ಗಾತ್ರ

ಹರಾರೆ:ನಜೀಬುಲ್ಲಾ ಜದ್ರಾನ್ (ಔಟಾಗದೆ 44; 25ಎ, 2ಬೌಂಡರಿ, 3ಸಿಕ್ಸರ್) ಅವರ ಬ್ಯಾಟಿಂಗ್ ಬಲದಿಂದ ಅಫ್ಗಾನಿಸ್ತಾನ ತಂಡವು ಜಿಂಬಾಬ್ವೆ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಜಯಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಿಕಂದರ್ ರಝಾ (45; 31ಎ) ಅವರ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 159 ರನ್ ಗಳಿಸಿತು.

ಅಫ್ಗಾನಿಸ್ತಾನ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿಯಿರುವಾಗಲೇ ಅಫ್ಗನ್ ತಂಡವು ಗುರಿ ಮುಟ್ಟಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 20 ಓವರ್‌ಗಳಲ್ಲಿ 8ಕ್ಕೆ159 (ವೆಸ್ಲಿ ಮಾದೆವೆರ್ 32, ರೆಗಿಸ್ ಚಕ್‌ಬ್ವಾ 29, ಸಿಕಂದರ್ ರಝಾ 45, ನಿಜತ್ ಮಸೂದ್ 39ಕ್ಕೆ3)

ಅಫ್ಗಾನಿಸ್ತಾನ: 19.2 ಓವರ್‌ಗಳಲ್ಲಿ 4ಕ್ಕೆ160 (ಹಜರತ್‌ಉಲ್ಲಾ ಝಝೈ 45, ರೆಹಮಾನುಲ್ಲಾ ಗುರ್ಬಾಜ್ 33, ನಜೀಬುಲ್ಲಾ ಜದ್ರಾನ್ ಔಟಾಗದೆ 44, ರಿಯಾನ್ ಬುರಿ 14ಕ್ಕೆ3)

ಫಲಿತಾಂಶ: ಅಫ್ಗಾನಿಸ್ತಾನಕ್ಕೆ 6 ವಿಕೆಟ್‌ಗಳ ಜಯ. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT