ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಗೆ ಆಘಾತ ನೀಡಿದ ಜಿಂಬಾಬ್ವೆ: 3 ವಿಕೆಟ್‌ಗಳ ಗೆಲುವು

Last Updated 3 ಸೆಪ್ಟೆಂಬರ್ 2022, 14:14 IST
ಅಕ್ಷರ ಗಾತ್ರ

ಟೌನ್ಸ್‌ವಿಲ್‌: ಲೆಗ್‌ಸ್ಪಿನ್ನರ್‌ ರಿಯಾನ್‌ ಬರ್ಲ್‌ (10ಕ್ಕೆ 5) ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಜಿಂಬಾಬ್ವೆ ತಂಡ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿ ಅಚ್ಚರಿ ಮೂಡಿಸಿತು.

ಟೌನ್ಸ್‌ವಿಲ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 31 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟಾಯಿತು. ಡೇವಿಡ್‌ ವಾರ್ನರ್‌ (94 ರನ್‌, 96 ಎ., 4X14, 6X2) ಹೊರತುಪಡಿಸಿ ಇತರ ಎಲ್ಲರೂ ವಿಫಲರಾದರು. ವಾರ್ನರ್ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ (19) ಮಾತ್ರ ಎರಡಂಕಿಯ ಮೊತ್ತ ತಲುಪಿದರು. ಮೂರು ಓವರ್‌ ಬೌಲ್‌ ಮಾಡಿದ ಬರ್ಲ್‌ ಐದು ವಿಕೆಟ್‌ ಸಾಧನೆ ಮಾಡಿದರು.

ಜಿಂಬಾಬ್ವೆ ತಂಡ 39 ಓವರ್‌ಗಳಲ್ಲಿ 7 ವಿಕೆಟ್‌ಗೆ 142 ರನ್‌ ಗಳಿಸಿ ಜಯ ಸಾಧಿಸಿತು. ಟ್ಯಾಡಿವನಾಶೆ ಮರುಮನಿ (35) ಮತ್ತು ರೆಗಿಸ್‌ ಚಕಾಬ್ವಾ (ಔಟಾಗದೆ 37‌) ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಜಿಂಬಾಬ್ವೆ ತಂಡ ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿದ್ದು ಇದೇ ಮೊದಲು.

ಮೊದಲ ಎರಡು ಪಂದ್ಯಗಳನ್ನು ಜಯಿಸಿದ್ದ ಆಸ್ಟ್ರೇಲಿಯಾ ಸರಣಿಯನ್ನು 2–1 ರಲ್ಲಿ ತನ್ನದಾಗಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ 31 ಓವರ್‌ಗಳಲ್ಲಿ 141 (ಡೇವಿಡ್‌ ವಾರ್ನರ್‌ 94, ಗ್ಲೆನ್‌ ಮ್ಯಾಕ್ಸ್‌ವೆಲ್‌ 19, ಆ್ಯರನ್‌ ಫಿಂಚ್‌ 5, ರಿಯಾನ್‌ ಬರ್ಲ್‌ 10ಕ್ಕೆ 5, ಬ್ರಾಡ್‌ ಇವಾನ್ಸ್‌ 35ಕ್ಕೆ 2)

ಜಿಂಬಾಬ್ವೆ 39 ಓವರ್‌ಗಳಲ್ಲಿ 7 ವಿಕೆಟ್‌ಗೆ 142 (ಟ್ಯಾಡಿವನಾಶೆ ಮರುಮನಿ 35, ರೆಗಿಸ್‌ ಚಕಾಬ್ವಾ ಔಟಾಗದೆ 37, ಜೋಶ್‌ ಹ್ಯಾಜಲ್‌ವುಡ್‌ 30ಕ್ಕೆ 3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT