ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವ ತಿರಸ್ಕರಿಸಿದ ಫಿಫಾ

2020ರ ಫುಟ್‌ಬಾಲ್‌ ವಿಶ್ವಕಪ್‌ಗೆ ತಂಡಗಳ ಹೆಚ್ಚಳ
Last Updated 23 ಮೇ 2019, 20:18 IST
ಅಕ್ಷರ ಗಾತ್ರ

ಲಾಸನ್‌: 2020ರ ವಿಶ್ವಕಪ್‌ ಟೂರ್ನಿಗೆ 48 ತಂಡಗಳನ್ನು ಆಡಿಸುವ ಪ್ರಸ್ತಾವವನ್ನು ಬುಧವಾರ ಫಿಫಾ ತಿರಸ್ಕರಿಸಿದೆ. ಕತಾರ್‌ನಲ್ಲಿ ನಡೆಯಲಿರುವ ಟೂರ್ನಿಗೆ 32 ತಂಡಗಳ ಬದಲಿಗೆ 48 ತಂಡಗಳನ್ನು ಆಡಿಸಬೇಕೆಂಬುದು ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರ ಬಯಕೆಯಾಗಿತ್ತು.

’ಸಮಗ್ರ ಹಾಗೂ ವ್ಯಾಪಕ ಸಮಾಲೋಚನಾ ಪ್ರಕ್ರಿಯೆ’ಗಳ ನಂತರ ಪ್ರಸ್ತುತ ಸಂದರ್ಭದಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗದು ಎಂಬ ನಿರ್ಧಾರಕ್ಕೆ ಬಂದ ಕಾರಣ ಫಿಫಾ ಈ ವಿಚಾರವನ್ನು ಕೈ ಬಿಟ್ಟಿದೆ.

‘ಈ ಮೊದಲು ಯೋಜಿಸಿದಂತೆಯೇ ವಿಶ್ವಕಪ್‌ನಲ್ಲಿ 32 ತಂಡಗಳ ಇರಲಿವೆ ಹಾಗೂ ಜೂ.5ರಂದು ಸೇರುವ ಮುಂದಿನ ಅಧಿವೇಶನದವರೆಗೂ ಯಾವುದೇ ಪ್ರಸ್ತಾವಕ್ಕೆ ಅವಕಾಶವಿಲ್ಲ’ ಎಂದು ಫಿಫಾ ಹೇಳಿದೆ.

ತಂಡಗಳನ್ನು ಹೆಚ್ಚಿಸುವುದು ಇನ್ಫಾಂಟಿನೊ ಅವರ ನೆಚ್ಚಿನ ಯೋಜನೆ ಯಾಗಿತ್ತು. ಅಧ್ಯಯನವೊಂದರ‍ಪ್ರಕಾರ ‘ಕತಾರ್‌ ವಿಶ್ವಕಪ್‌ ಟೂರ್ನಿಯು 48 ತಂಡಗಳೊಂದಿಗೆ ನಡೆದರೆ 300–400 ಮಿಲಿಯನ್‌ ಡಾಲರ್‌ ಹೆಚ್ಚುವರಿ ಆದಾಯ ಸೇರಲಿದೆ’.

ಟಿವಿ ಹಕ್ಕುಗಳ ಮೂಲಕ 120 ಮಿಲಿಯನ್‌ ಡಾಲರ್‌, 150 ಮಿಲಿಯನ್‌ ಡಾಲರ್‌ ಮಾರಾಟ ಹಕ್ಕುಗಳ ಮೂಲಕ ಹಾಗೂ 90 ಮಿಲಿಯನ್‌ ಡಾಲರ್‌ ಟಿಕೆಟ್‌ ಹಕ್ಕುಗಳ ಮೂಲಕ ಈ ಹೆಚ್ಚುವರಿ ಆದಾಯವನ್ನು ಫಿಫಾ ಲೆಕ್ಕ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT