ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್: ಕ್ರೀಡಾಂಗಣ ಪರಿಶೀಲಿಸಿದ ಎಫ್‌ಐಎಚ್

Last Updated 7 ಸೆಪ್ಟೆಂಬರ್ 2022, 15:48 IST
ಅಕ್ಷರ ಗಾತ್ರ

ರೂರ್ಕೆಲಾ (ಪಿಟಿಐ): ಮುಂದಿನ ವರ್ಷ ವಿಶ್ವಕಪ್ ಪುರುಷರ ಹಾಕಿ ಟೂರ್ನಿಯನ್ನು ಆಯೋಜಿಸಲಿರುವ ಕ್ರೀಡಾಂಗಣದ ನಿರ್ಮಾಣ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ಉನ್ನತ ಅಧಿಕಾರಿಗಳ ಸಮಿತಿಯು ತೃಪ್ತಿ ವ್ಯಕ್ತಪಡಿಸಿದೆ.

ಇದೇ ಸಂದರ್ಭದಲ್ಲಿ ಇಲ್ಲಿ ಸಿದ್ಧವಾಗಿರುವ ತರಬೇತಿ ಕೇಂದ್ರವನ್ನೂ ಸಮಿತಿಯ ಅಧಿಕಾರಿಗಳು ಉದ್ಘಾಟಿಸಿದರು. ಎಫ್‌ಐಎಚ್ ಹಂಗಾಮಿ ಅಧ್ಯಕ್ಷ ಸೀಫ್ ಅಹಮದ್ ಅವರು ಒಡಿಶಾ ಹಾಗೂ ಹಾಕಿ ಇಂಡಿಯಾ ಕಾರ್ಯವನ್ನು ಶ್ಲಾಘಿಸಿದರು.

‘ಇವತ್ತು ನಾವು ಇಲ್ಲಿ ನೋಡಿರುವ ಕಾರ್ಯವು ಅದ್ಭುತವಾಗಿದೆ. ಬಹಳ ಚೆಂದದ ಕ್ರೀಡಾಂಗಣ ಇಲ್ಲಿ ರೂಪುಗೊಂಡಿದೆ. ಭುವನೇಶ್ವರ ಹಾಗೂ ರೂರ್ಕೆಲಾದಲ್ಲಿ ಅಮೋಘವಾದ ವಿಶ್ವಕಪ್ ಟೂರ್ನಿಯನ್ನು ನೋಡುವ ಭರವಸೆ ಮೂಡಿದೆ ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಶ್ಚಿಮ ಒಡಿಶಾದ ಸುಂದರಘಡ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಗ್ಯಾಲರಿ ನಿರ್ಮಿಸಲಾಗಿದೆ. ಒಟ್ಟು 35 ಎಕರೆಯ ಜಾಗದಲ್ಲಿ ಕ್ರೀಡಾಂಗಣ ಮತ್ತು ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಬಿಜು ಪಟ್ನಾಯಕ್ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT