ಶನಿವಾರ, ಜುಲೈ 31, 2021
21 °C

2022ರ ಫಿಫಾ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಕತಾರ್‌ನಲ್ಲಿ 2022ರಲ್ಲಿ ಫಿಫಾ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಅದರಲ್ಲಿ ಪ್ರತಿದಿನ ನಾಲ್ಕು ಪಂದ್ಯಗಳನ್ನು ನಡೆಸಲು ಯೋಜಿಸಲಾಗಿದೆ

 ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಟೂರ್ನಿಗಳು ನಡೆಯಲಿವೆ. ಪ್ರತಿದಿನ ಮಧ್ಯಾಹ್ನ 1 ಗಂಟೆ, ಸಂಜೆ 4ಗಂಟೆ, ರಾತ್ರಿ 7 ಮತ್ತು 10 ಗಂಟೆಗೆ ಪಂದ್ಯಗಳು ನಡೆಯಲಿವೆ. ಮಧ್ಯರಾತ್ರಿಯವರೆಗೂ ಹೆಚ್ಚುವರಿ ಅವಧಿಯನ್ನು ನಿಗದಿ ಮಾಡಲಾಗಿದೆ.

’ತಂಡಗಳ ಮುಖಾಮುಖಿ ಖಚಿತವಾದರೆ, ಕಿಕ್ ಆಫ್ ವೇಳೆಯಲ್ಲಿ ಮತ್ತಷ್ಟು ಸುದಾರಣೆ ಮಾಡಲು ಅವಕಾಶವಿದೆ. ಇದರಿಂದಾಗಿ ಪ್ರೇಕ್ಷಕರಿಗೆ ಅನುಕೂಲವಾಗಲಿದೆ.  ಕ್ರೀಡಾಂಗಣಕ್ಕೆ ಬಂದು ವೀಕ್ಷಿಸುವವರಿಗೂ ಸರಾಗವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ‘ ಎಂದು ಫಿಫಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊಲ್ಲಿರಾಷ್ಟ್ರದಲ್ಲಿ ನಡೆಯಲಿರುವ ಮೊದಲ ಫಿಫಾ ವಿಶ್ವಕಪ್ ಟೂರ್ನಿ ಇದಾಗಲಿದೆ. ಅಲ್ ಬೈತ್ ಕ್ರೀಡಾಂಗಣದಲ್ಲಿ ನವೆಂಬರ್ 21 ರಂದು ಟೂರ್ನಿಯ ಉದ್ಘಾಟನೆಯಾಗಲಿದೆ. ಈ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ 60 ಸಾವಿರ ಜನರಿಗೆ ಅವಕಾಶವಿದೆ. 

ಡಿಸೆಂಬರ್ 18ರಂದು ಸಂಜೆ 6ಕ್ಕೆ ಲುಸೆಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 80 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇದಕ್ಕೆ ಇದೆ.

32 ರಾಷ್ಟ್ರಗಳ ತಂಡಗಳು ಸ್ಪರ್ಧಿಸುವ ಕೊನೆಯ ವಿಶ್ವಕಪ್ ಇದಾಗಲಿದೆ. 2026ರಿಂದ 48 ತಂಡಗಳು ಆಡಲಿವೆ. ಆ ವರ್ಷದ ಟೂರ್ನಿಯು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು