ಸುಝೌ (ಚೀನಾ), (ಪಿಟಿಐ): ಭಾರತ ತಂಡ, ಎಎಫ್ಸಿ 17 ವರ್ಷದೊಳಗಿನವರ ಮಹಿಳಾ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಪ್ರಬಲ ಜಪಾನ್ ಎದುರು 0–3 ಗೋಲುಗಳ ಸೋಲನುಭವಿಸಿತು.

‘ಬಿ’ ಗುಂಪಿನ ಈ ಪಂದ್ಯದ ಪೂರ್ವಾರ್ಧದಲ್ಲಿ ಭಾರತ ಒಂದೂ ಗೋಲು ಬಿಟ್ಟುಕೊಟ್ಟಿರಲಿಲ್ಲ. ಆದರೆ ಪಂದ್ಯದ 59ನೇ ನಿಮಿಷ ಯುಮಿ ಹಯಾಷಿ ಜಪಾನ್ಗೆ ಮುನ್ನಡೆ ಒದಗಿಸಿದರು. ನಂತರ ಯುಝುಹಾ ಇಕೆಡಾ ಎರಡು (76, 81ನೇ) ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು.

ಇದು ಜಪಾನ್ಗೆ ಎರಡನೇ ಜಯವಾಗಿದ್ದು, ಆರು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಎರಡೂ ಪಂದ್ಯಗಳನ್ನು ಸೋತ ಭಾರತ ಕೊನೆಯ ಸ್ಥಾನದಲ್ಲಿದೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಲೆಬನಾನ್ 1–1 ಡ್ರಾ ಮಾಡಿಕೊಂಡಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-496607380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.