ಪರ್ತ್: ಸಾಂಘಿಕ ಆಟ ಪ್ರದರ್ಶಿಸಿದ ಬಲಿಷ್ಠ ಜಪಾನ್ ತಂಡವು ಶನಿವಾರ ಮಹಿಳಾ ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಭಾರತವನ್ನು 11–0 ಅಂತರದಿಂದ ಸುಲಭವಾಗಿ ಮಣಿಸಿ, ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆಯಿತು.

ಸಿ ಗುಂಪಿನಲ್ಲಿರುವ ಭಾರತ ತಂಡಕ್ಕೆ ಇದು ಸತತ ಎರಡನೇ ಸೋಲಾಗಿದೆ. ಗುಂಪು ಹಂತದ ತನ್ನ ಮೊದಲ ಪಂದ್ಯದಲ್ಲಿ 1–2ರಿಂದ ವಿಯೆಟ್ನಾಂ ತಂಡಕ್ಕೆ ಸೋತಿತ್ತು. ಇದರೊಂದಿಗೆ ಭಾರತ ತಂಡದ ನಾಕೌಟ್ ಕನಸು ಬಹುತೇಕ ಕಮರಿದೆ.

ಹಿನಾಟಾ ಮಿಯಾಜಾವಾ ಮತ್ತು ರಿಕೊ ಉಯೆಕಿ ಇಬ್ಬರೂ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಜಪಾನ್ ಗೆಲುವಿನಲ್ಲಿ ಮಿಂಚಿದರು. ಸತತ ಎರಡು ಪಂದ್ಯಗಳನ್ನು ಗೆದ್ದ ಜಪಾನ್ (6 ಅಂಕ) ಗುಂಪಿನಲ್ಲಿ ಅಗ್ರಸ್ಥಾನ ಬಲಪಡಿಸಿಕೊಂಡಿತು. ಒಂದು ಪಂದ್ಯ ಬಾಕಿ ಇರುವಂತೆ ಎಂಟರ ಘಟ್ಟಕ್ಕೆ ಅರ್ಹತೆ ಪಡೆಯಿತು. ಜಪಾನ್ ಇದಕ್ಕೂ ಮುನ್ನ 2–0ಯಿಂದ ತೈವಾನ್ ತಂಡವನ್ನು ಮಣಿಸಿತ್ತು.

ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಕೇವಲ ನಾಲ್ಕು ನಿಮಿಷಗಳಲ್ಲೇ ಯುಜುಕಿ ಯಮಮೊಟೊ ಗೋಲು ಗಳಿಸಿ ಜಪಾನ್ ತಂಡಕ್ಕೆ ಮುನ್ನಡೆ ಒದಗಿಸಿದರು. ಮಧ್ಯಂತರದ ವೇಳೆ ಅದನ್ನು ಮತ್ತಷ್ಟು (5–0) ಹೆಚ್ಚಿಸಿಕೊಂಡು ಹಿಡಿತ ಸಾಧಿಸಿತು. ಉತ್ತರಾರ್ಧದಲ್ಲೂ ಜಪಾನ್ ತಂಡವು ಭಾರತಕ್ಕೆ ಗೋಲಿನ ಅವಕಾಶ ನೀಡದೆ ಪಾರಮ್ಯ ಸಾಧಿಸಿತು. ಜಪಾನ್ ತಂಡದ ಯಮಮೊಟೊ ಮತ್ತು ರಿಕೊ ಯುಕಿ ತಲಾ ಎರಡು ಗೋಲು ಗಳಿಸಿದರು. ಮತ್ತೊಂದು ಗೋಲನ್ನು ಮಾಯಾ ಹಿಜಿಕಾಟಾ ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ತೈವಾನ್ ತಂಡವು 1–0ಯಿಂದ ವಿಯೆಟ್ನಾಂ ತಂಡವನ್ನು ಮಣಿಸಿತು. ತೈವಾನ್ ಮತ್ತು ವಿಯೆಟ್ನಾಂ ತಲಾ ಮೂರು ಅಂಕಗಳೊಂದಿಗೆ ಗುಂಪಿನಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಯಾವುದೇ ಅಂಕಗಳಿಲ್ಲದ ಭಾರತ ತಂಡವು ಕೊನೆಯ ಸ್ಥಾನದಲ್ಲಿದೆ. ಭಾರತ ತಂಡವು ಮಂಗಳವಾರ ತನ್ನ ಕೊನೆಯ ಪಂದ್ಯದಲ್ಲಿ ತೈವಾನ್ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಚೀನಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.