ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್ಬಾಲ್ ಫೆಡರೇಷನ್‌ಗೆ ಎಲೀಟ್‌ ಯುವ ಯೋಜನೆಯ ಸದಸ್ಯತ್ವ

Last Updated 4 ಜುಲೈ 2020, 13:31 IST
ಅಕ್ಷರ ಗಾತ್ರ

ನವದೆಹಲಿ:ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್‌)ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್ (ಎಎಫ್‌ಸಿ),‌ ಎಲೀಟ್‌ ಯುವ ಯೋಜನೆಯ ಪೂರ್ಣ ಸದಸ್ಯತ್ವ ಸ್ಥಾನಮಾನವನ್ನು ನೀಡಿದೆ.

‘ಎಲೀಟ್‌ ಯುವ ಯೋಜನೆಯ ಪೂರ್ಣ ಸದಸ್ಯತ್ವಕ್ಕಾಗಿ ಎಐಎಫ್‌ಎಫ್ ಸಲ್ಲಿಸಿದ್ದ ಅರ್ಜಿಯನ್ನು ನಮ್ಮ ಯುವ ಸಮಿತಿ ಅಂಗೀಕರಿಸಿದೆ’ ಎಂದು ಎಎಫ್‌ಸಿ ಪ್ರಧಾನ ಕಾರ್ಯದರ್ಶಿ ಡ್ಯಾಟೊ ವಿಂಡ್ಸರ್‌ ಜಾನ್‌ ಹೇಳಿದ್ದಾರೆ.

‘ಎಐಎಫ್‌ಎಫ್‌ಗೆ ಯುವ ಯೋಜನೆಯ ಪೂರ್ಣ ಸದಸ್ಯತ್ವದ ಸ್ಥಾನಮಾನ ಹಾಗೂ ರಿಲಯನ್ಸ್ ಫೌಂಡೇಷನ್‌ ಯುವ ಕ್ಯಾಂಪಸ್‌ ಅಕಾಡೆಮಿ ಮತ್ತು ಜೆಎಸ್‌ಡಬ್ಲ್ಯು ಬೆಂಗಳೂರು ಎಫ್‌ಸಿ ಅಕಾಡೆಮಿಗಳಿಗೆ ‘ಟು ಸ್ಟಾರ್‌’ ಅಕಾಡೆಮಿ ಸ್ಥಾನಮಾನ ನೀಡುತ್ತಿದ್ದೇವೆ’ ಎಂದು ಎಎಫ್‌ಸಿ,ಎಐಎಫ್‌ಎಫ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ. ಮೂರು ವರ್ಷಗಳ ಬಳಿಕ ಈ ಸ್ಥಾನಮಾನದ ಮರು ಮೌಲ್ಯಮಾಪನ ನಡೆಯಲಿದೆ.

ಸ್ಥಾನಮಾನ ನೀಡಿದ ಎಎಫ್‌ಸಿಗೆ ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಾಲ್‌ ದಾಸ್‌ ಕೃತಜ್ಞತೆ ಸಲ್ಲಿಸಿದ್ದಾರೆ.

‘ತಮ್ಮ ಯುವ ಫುಟ್‌ಬಾಲ್ ಸಂರಚನೆಯ ಮೌಲ್ಯಮಾಪನ ಮಾಡಲುಎಲ್ಲಾ ಸದಸ್ಯ ಸಂಸ್ಥೆಗಳಿಗೆ, ಎಲೀಟ್‌ ಯುವ ಯೋಜನೆಯು ಮಾನದಂಡವನ್ನು ನಿಗದಿಪಡಿಸಿದೆ. ಭಾರತದಲ್ಲಿ ಯುವ ಲೀಗ್ ಸಂರಚನೆ ಹೆಚ್ಚಿಸಲು ಮತ್ತು ಫುಟ್‌ಬಾಲ್ ಆಟಗಾರರ ಆಟದ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಎಐಎಫ್ಎಫ್ ಕಾರ್ಯನಿರ್ವಹಿಸುತ್ತಿದೆ’ ಎಂದು ಕುಶಾಲ್‌ ದಾಸ್‌ ಹೇಳಿದ್ದಾರೆ.

20 ವಿವಿಧ ಮಾನದಂಡಗಳನ್ನು ಗಮನಿಸಿ ಎಎಫ್‌ಸಿ ಯುವ ಸಮಿತಿಯು ಸದಸ್ಯ ಸಂಸ್ಥೆಗಳ ಅರ್ಜಿಯನ್ನು ಸ್ಥಾನಮಾನಕ್ಕೆ ಪರಿಶೀಲಿಸುತ್ತದೆ. ನಾಯಕತ್ವ, ಯೋಜನೆ, ಸಂಘಟನೆ, ಸಿಬ್ಬಂದಿ, ನೇಮಕಾತಿ, ಹಣಕಾಸು, ಸೌಕರ್ಯಗಳು, ತಂಡಗಳು, ತರಬೇತಿ, ಆಟದ ರೀತಿ, ಆಟಗಾರನ ಸಾಮರ್ಥ್ಯ, ಆರೋಗ್ಯ ಮತ್ತು ಫಿಟ್‌ನೆಸ್‌ ಇದರಲ್ಲಿ ಸೇರಿವೆ.

ಇದರಲ್ಲಿ 11 ಮಾನದಂಡಗಳನ್ನು ಪೂರೈಸಿದ ಸಂಸ್ಥೆಗಳಿಗೆ ಯೋಜನೆಯ ಪೂರ್ಣ ಸದಸ್ಯತ್ವ ನೀಡಲಾಗುತ್ತದೆ. 10 ಮಾನದಂಡಗಳನ್ನು ಪೂರೈಸಿದ ಸಂಸ್ಥೆಯು ತಾತ್ಕಾಲಿಕ ಸದಸ್ಯತ್ವಕ್ಕೆ ಅರ್ಹತೆ ಪಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT