ಮಂಗಳವಾರ, ನವೆಂಬರ್ 19, 2019
29 °C
ಎಐಎಫ್‌ಎಫ್‌ ಶಿಸ್ತುಸಮಿತಿಯಿಂದ ಕ್ರಮ

ಗೋವಾ ಎಫ್‌ಸಿ ತಂಡ, ಆಟಗಾರರಿಗೆ ನೋಟಿಸ್‌

Published:
Updated:

ನವದೆಹಲಿ: ನಾರ್ತ್‌ಈಸ್ಟ್‌ ಯುನೈಟೆಡ್‌ ವಿರುದ್ಧ ಐಎಸ್‌ಎಲ್‌ ಪಂದ್ಯದ ವೇಳೆ ಅನುಚಿತವಾಗಿ ವರ್ತಿಸಿದ ಕಾರಣ ಗೋವಾ ಎಫ್‌ಸಿ ತಂಡಕ್ಕೆ ಮತ್ತು ಇಬ್ಬರು ಆಟಗಾರರಿಗೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಶಿಸ್ತು ಸಮಿತಿ ಷೋಕಾಸ್‌ ನೋಟಿಸ್‌ ನೀಡಿದೆ. 

ನವೆಂಬರ್‌ 1ರಂದು ಗುವಾಹಟಿಯಲ್ಲಿ ನಡೆದಿದ್ದ ಈ ಪಂದ್ಯ 2–2 ಡ್ರಾ ಆಗಿತ್ತು.  ಆಟಗಾರರಾದ ಸೀಮಿನ್‌ಲೆನ್‌ ಡಂಜೆಲ್‌, ಹ್ಯೂಗೊ ಬೌಮಸ್‌, ಮಸಾಜ್‌ ತಜ್ಞ ರಾಜೇಶ್‌ ಪಂಡಿಧರ್‌ ನೋಟಿಸ್‌ ಪಡೆದವರು.

ಪಂದ್ಯ ಮುಗಿಯುವ ಹಂತದಲ್ಲಿದ್ದಾಗ, ಮಾರ್ಟಿನ್‌ ಚೇವ್ಸ್‌ ಅವರನ್ನು ಹಿಂಬದಿಯಿಂದ ಒದ್ದ ಕಾರಣ ಡಂಜೆಲ್‌ ಒದ್ದ ಕಾರಣ ಅವರಿಗೆ ಕೆಂಪು ಕಾರ್ಡ್‌ ತೋರಿಸಿ ಹೊರಕಳುಹಿಸಲಾಗಿತ್ತು. ಇದು ಆಟಗಾರರ ನಡುವೆ ಒತ್ತಡದ ವಾತಾವರಣಕ್ಕೆ ಕಾರಣವಾಯಿತು.

ಪಂದ್ಯ ನಡೆಯುತ್ತಿರುವಾಗಲೇ ಬದಲಿ ಆಟಗಾರರು ಆಟದ ಆರೇನಾಕ್ಕೆ ನುಗ್ಗುತ್ತಿದ್ದರೂ ತಡೆಯದ ಕಾರಣ ಗೋವಾ ಎಫ್‌ಸಿಗೂ ನೋಟಿಸ್‌ ನೀಡಲಾಗಿದೆ. ಅನುಚಿತ ವರ್ತನೆಗಾಗಿ ಏಕೆ ಕ್ರಮ ಕೈಗೊಳ್ಳಬಾರದೆಂಬ ಕಾರಣ ಕೇಳಿದ್ದು,  ನವೆಂಬರ್‌ 9ರೊಳಗೆ ಆಟಗಾರರು ಉತ್ತರ ನೀಡಬೇಕಾಗಿದೆ.

ಪ್ರತಿಕ್ರಿಯಿಸಿ (+)