3

ಸೋಲಿನ ಆಘಾತ: ಶೋಕಸಾಗರದಲ್ಲಿ ಮುಳುಗಿದ ಅರ್ಜೆಂಟೀನಾ ಅಭಿಮಾನಿಗಳು

Published:
Updated:

ಬ್ಯೂನಸ್‌ ಐರಿಸ್‌: ಕ್ರೊವೇಷ್ಯಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಅನುಭವಿಸಿದ ಸೋಲು ಅರ್ಜೆಂಟೀನಾ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ. 

ವಿಶ್ವದ ಶ್ರೇಷ್ಠ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಮೋಡಿಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಈ ಪಂದ್ಯದ ಫಲಿತಾಂಶದಿಂದ ಆಘಾತಕ್ಕೊಳಗಾಗಿದ್ದಾರೆ. 

‘ನಾವು ತೀರ ಕೆಟ್ಟದಾಗಿ ಸೋತೆವು. ಈ ಸೋಲು ನಮ್ಮ ತಂಡಕ್ಕಾದ ದೊಡ್ಡ ಅವಮಾನ. ಈ ವಿಶ್ವಕಪ್‌ ಟೂರ್ನಿಯಲ್ಲಿ ಉಳಿಯಬೇಕಾದರೆ ಮುಂದಿನ ಪಂದ್ಯ ಗೆಲ್ಲಬೇಕಿದೆ. ಜೊತೆಗೆ ಅನ್ಯ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ’ ಎಂದು ಇಲ್ಲಿನ ಜೊಯಾಕ್ವಿನ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

‘ಬಾರ್ಸಿಲೋನಾ ತಂಡವನ್ನು ಹಲವು ಬಾರಿ ಏಕಾಂಗಿ ಹೋರಾಟದಿಂದ ಗೆಲ್ಲಿಸಿರುವ ಮೆಸ್ಸಿ ಈ ಪಂದ್ಯದಲ್ಲಿ ಸರಿಯಾಗಿ ಆಡಲಿಲ್ಲ. ಪ್ರತಿ ಬಾರಿಯೂ ಅವರು ಅರ್ಜೆಂಟೀನಾ ತಂಡಕ್ಕೆ ನಿರಾಸೆ ಉಂಟು ಮಾಡಿದ್ದಾರೆ’ ಎಂದು ಮಿಗೆಲ್‌ ಏಂಜೆಲ್‌ ಅವರು ಹೇಳಿದ್ದಾರೆ. 

ಕ್ಷಮೆ ಕೋರಿದ ಸ್ಯಾಂಪೊಲಿ:  ಅರ್ಜೆಂಟೀನಾ ತಂಡದ ತರಬೇತುದಾರ ಜಾರ್ಜ್‌ ಸ್ಯಾಂಪೊಲಿ ಅವರು ತಂಡದ ಸೋಲಿಗೆ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. 

‘ಅಷ್ಟು ದೂರದಿಂದ ತಂಡಕ್ಕೆ ಪ್ರೋತ್ಸಾಹಿಸಲು ರಷ್ಯಾಗೆ ಬಂದ ಅಭಿಮಾನಿಗಳಿಗೆ ಉಂಟಾದ ನಿರಾಸೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಸೋಲಿಗೆ ನಾನೇ ಕಾರಣ’ ಎಂದು ಅವರು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !