ಸೋಮವಾರ, ಆಗಸ್ಟ್ 2, 2021
28 °C

ಫುಟ್‌ಬಾಲ್: ಅರ್ಸೆನಲ್‌ಗೆ ಜಯ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್: ದೀರ್ಘ ಅವಧಿಯ ನಂತರ ಇಂಗ್ಲೆಂಡ್‌ ನೆಲದಲ್ಲಿ ಫುಟ್‌ಬಾಲ್ ಕಲರವ ಮತ್ತೆ ಮರಳಿದೆ.

ಅರ್ಸನಲ್ ಕ್ಲಬ್ ತಂಡವು ಶನಿವಾರ ನಡೆದ ಪಂದ್ಯದಲ್ಲಿ 6–0 ಗೋಲುಗಳಿಂದ ಚಾರ್ಲಟನ್ ಅಥ್ಲೆಟಿಕ್ ವಿರುದ್ಧ ಅಮೋಘ ಜಯ ಗಳಿಸಿದೆ.

ಎಮಿರೇಟ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  ಅಮೋಘ ಆಟವಾಡಿದ ಅರ್ಸನಲ್ ಆಟಗಾರರು ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಎರಡೂವರೆ ತಿಂಗಳುಗಳ ಹಿಂದೆ ಕೊರೊನಾ ವೈರಸ್‌ ಸೋಂಕು ತಡೆಗೆ ಲಾಕ್‌ಡೌನ್ ಘೋಷಿಸಿದ್ದರಿಂದ ಇಂಗ್ಲಿಷ್ ಪ್ರೀಮಿಯರ್ ಲೀಗ್ ಮುಂದೂಡಲಾಗಿತ್ತು. ಅದರ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಫುಟ್‌ಬಾಲ್ ಪಂದ್ಯ ನಡೆದಿದೆ.

ಜೂನ್ 17ರಿಂದ ಸ್ನೇಹಪರ ಪಂದ್ಯಗಳನ್ನು ನಡೆಸಲೂ ಅನುಮತಿಯನ್ನು ಸರ್ಕಾರವು ನೀಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು