ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಎ ಕಪ್‌ ಫುಟ್‌ಬಾಲ್‌: ಸೆಮಿಗೆ ಆರ್ಸೆನಲ್‌

Last Updated 28 ಜೂನ್ 2020, 15:07 IST
ಅಕ್ಷರ ಗಾತ್ರ

ಶೆಫೀಲ್ಡ್‌(ಇಂಗ್ಲೆಂಡ್‌): ಹೆಚ್ಚುವರಿ ಅವಧಿಯಲ್ಲಿ ಕಾಲ್ಚಳಕ ತೋರಿದ ಡ್ಯಾನಿ ಸೆಬಲ್ಲಸ್‌‌ ಅವರು ಆರ್ಸೆನಲ್‌ ತಂಡದ ಪಾಲಿನ ‘ಹೀರೊ’ ಆದರು.

ಡ್ಯಾನಿ ಮತ್ತು ನಿಕೋಲಸ್‌ ಪೆಪೆ ಗಳಿಸಿದ ಗೋಲುಗಳ ಬಲದಿಂದ ಆರ್ಸೆನಲ್‌ ತಂಡವು ಎಫ್‌ಎ ಕಪ್‌ ಫುಟ್‌ಬಾಲ್‌ ಲೀಗ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿತು.

ಭಾನುವಾರ ನಡೆದ ರೋಚಕ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಆರ್ಸೆನಲ್‌ 2–1 ಗೋಲುಗಳಿಂದ ಶೆಫೀಲ್ಡ್‌ ಯುನೈಟೆಡ್‌ ತಂಡವನ್ನು ಪರಾಭವಗೊಳಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಆರ್ಸೆನಲ್‌ ತಂಡವು 25ನೇ ನಿಮಿಷದಲ್ಲಿ ಖಾತೆ ತೆರೆಯಿತು. ಪೆಪೆ ಅವರು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ನಂತರದ ಅವಧಿಯಲ್ಲಿ ಸಮಬಲದ ಹೋರಾಟ ಕಂಡುಬಂತು.

ನಿಗದಿತ ಅವಧಿಯ ಆಟ ಮುಗಿಯಲು ನಾಲ್ಕು ನಿಮಿಷಗಳು ಬಾಕಿ ಇದ್ದಾಗ ಆರ್ಸೆನಲ್‌ ತಂಡ 1–0 ಮುನ್ನಡೆ ಹೊಂದಿತ್ತು. 87ನೇ ನಿಮಿಷದಲ್ಲಿ ಶೆಫೀಲ್ಡ್‌ ತಂಡದ ಡೇವಿಡ್‌ ಮೆಕ್‌ಗೋಲ್ಡ್ರಿಕ್‌ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ಹೆಚ್ಚುವರಿ ಅವಧಿಯ (ಇಂಜುರಿ ಟೈಮ್‌) ಆರಂಭದಲ್ಲೇ ಮಿಡ್‌ಫೀಲ್ಡರ್‌ ಡ್ಯಾನಿ, ಮೋಡಿ ಮಾಡಿದರು. 90+1ನೇ ನಿಮಿಷದಲ್ಲಿ ಗೋಲು ಹೊಡೆದ ಅವರು ಆರ್ಸೆನಲ್‌ ಆಟಗಾರರು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT