ಭಾನುವಾರ, ಜನವರಿ 19, 2020
20 °C

ಫುಟ್‌ಬಾಲ್: ಎಎಸ್‌ಸಿ ಸೆಂಟರ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೋತಿನ್ ಸಿಂಗ್ ಮತ್ತು ನೀರಜ್ ಸಿಂಗ್ ಅವರ ಮಿಂಚಿನ ಆಟದ ನೆರವಿನಿಂದ ಎಎಸ್‌ಸಿ ಆ್ಯಂಡ್ ಸೆಂಟರ್ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಜಾರ್ಜ್ ಹೂವರ್ ಮತ್ತು ಜಿಎಂಎಚ್ ಬಾಷಾ ಕಪ್‌ಗಾಗಿ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 2–1ರಿಂದ ಬೆಂಗಳೂರು ಈಗಲ್ಸ್‌ ಎಫ್‌ಸಿಯನ್ನು ಎಎಸ್‌ಸಿ ತಂಡ ಮಣಿಸಿತು.

38ನೇ ನಿಮಿಷದಲ್ಲಿ ಗೋಲು ಗಳಿಸಿದ ಜೋತಿನ್ ಸಿಂಗ್ ಎಎಸ್‌ಸಿಗೆ ಮುನ್ನಡೆ ಗಳಿಸಿಕೊಟ್ಟಿದ್ದರು. ಆದರೆ ಸೆಲ್ಟಸ್ ಡೊಮಿನಿಕ್ 55ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲ ತಂದುಕೊಟ್ಟರು. 78ನೇ ನಿಮಿಷದಲ್ಲಿ ನೀರಜ್ ಸಿಂಗ್ ಗಳಿಸಿದ ಗೋಲಿನ ಮೂಲಕ ಮುನ್ನಡೆಯನ್ನು ಕಾಯ್ದುಕೊಂಡ ಎಎಸ್‌ಸಿ ನಂತರ ಎದುರಾಳಿಗಳನ್ನು ಸತತವಾಗಿ ಕಾಡಿತು.

ಎಜಿಒಆರ್‌ಸಿ ಎಫ್‌ಸಿ ಮತ್ತು ಎಡಿಇ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು. ಮಂಗಳವಾರ ಮಧ್ಯಾಹ್ನ 1.30ಕ್ಕೆ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ಮತ್ತು ಸೌತ್ ಯುನೈಟೆಡ್ ಎಫ್‌ಸಿ ತಂಡಗಳು ಸೆಣಸಲಿವೆ. 3.30ಕ್ಕೆ ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ಬಿಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು