ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಜೊತೆ ತಾಳ–ಮೇಳದ ಆಟ: ಜೆಜೆ ಲಾಲ್‌ಫೆಕ್ಲುವಾ ಅಭಿಪ್ರಾಯ

Last Updated 25 ಡಿಸೆಂಬರ್ 2018, 17:28 IST
ಅಕ್ಷರ ಗಾತ್ರ

ನವದೆಹಲಿ: ‘ಸುನಿಲ್ ಚೆಟ್ರಿ ಜೊತೆ ತಾಳ–ಮೇಳದ ಆಟವಾಡಿದರೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿದೆ’ ಎಂದು ಭಾರತ ಫುಟ್‌ಬಾಲ್ ತಂಡದ ಆಟಗಾರ ಜೆಜೆ ಲಾಲ್‌ಫೆಕ್ಲುವಾ ಅಭಿಪ್ರಾಯಪಟ್ಟರು.

2005ರಿಂದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಚೆಟ್ರಿ ಈ ವರೆಗೆ 103 ಪಂದ್ಯಗಳಿಂದ 65 ಗೋಲು ಗಳಿಸಿದ್ದಾರೆ. ಆದರೆ ಏಷ್ಯಾಕಪ್‌ನಲ್ಲಿ ತಂಡ ನಾಕೌಟ್ ಹಂತ ಪ್ರವೇಶಿಸಬೇಕಾದರೆ ಲಾಲ್‌ಫೆಕ್ಲುವಾ ಕೂಡ ಚೆನ್ನಾಗಿ ಆಡಬೇಕು ಎಂಬುದು ಫುಟ್‌ಬಾಲ್‌ ಪ್ರಿಯರ ಆಶಯ. ಟೂರ್ನಿ ಜನವರಿ ಐದರಿಂದ ಫೆಬ್ರುವರಿ ಒಂದರ ವರೆಗೆ ಯುಎಇಯಲ್ಲಿ ನಡೆಯಲಿದೆ.

‘ಪದಾರ್ಪಣೆ ಪಂದ್ಯದಲ್ಲೇ ಸುನಿಲ್ ಚೆಟ್ರಿ ಜೊತೆ ಆಡಿದ್ದೇನೆ. ಅಂದಿನಿಂದ ಇಲ್ಲಿಯವರೆಗೂ ಜೊತೆಯಲ್ಲೇ ಆಡುತ್ತಿ ದ್ದೇವೆ. ಅಂಗಣದಲ್ಲಿ ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದ್ದು ಇದೇ ರೀತಿ ಮುಂದುವರಿದರೆ ಏಷ್ಯಾಕಪ್‌ನಲ್ಲಿ ಉತ್ತಮ ಸಾಧನೆ ಮೂಡಿಬರಲಿದೆ’ ಎಂದು ಮಿಜೋರಾಂನ ಲಾಲ್‌ಫೆಕ್ಲುವಾ ಮಂಗಳವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT