ಫುಟ್‌ಬಾಲ್‌: ಸೌತ್‌ ಇಂಡಿಯಾಗೆ ಜಯ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಫುಟ್‌ಬಾಲ್‌: ಸೌತ್‌ ಇಂಡಿಯಾಗೆ ಜಯ

Published:
Updated:

ಬೆಂಗಳೂರು: ಸೌತ್‌ ಇಂಡಿಯಾ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್ಎ) ಆಶ್ರಯದ ‘ಬಿ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ಸೌತ್‌ ಇಂಡಿಯಾ 3–1 ಗೋಲುಗಳಿಂದ ಸನ್‌ರೈಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದ ಸೌತ್‌ ಇಂಡಿಯಾ ತಂಡ 20ನೇ ನಿಮಿಷದಲ್ಲಿ ಖಾತೆ ತೆರೆಯಿತು. ಆಕಾಶ್‌, ಚೆಂಡನ್ನು ಗುರಿ ಸೇರಿಸಿದರು.

ನಂತರ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ದ್ವಿತೀಯಾರ್ಧದ ಆರಂಭದಲ್ಲಿ ಸೌತ್‌ ಇಂಡಿಯಾ ತಂಡ ಮುನ್ನಡೆ ಹೆಚ್ಚಿಸಿಕೊಂಡಿತು. 62ನೇ ನಿಮಿಷದಲ್ಲಿ ಜಿಯೋಫ್ರಿ ಗೋಲು ಹೊಡೆದರು. ಇದರ ಬೆನ್ನಲ್ಲೇ ಸನ್‌ರೈಸ್‌ ತಂಡದ ಆ್ಯಂಟೊ (68ನೇ ನಿಮಿಷ) ಕಾಲ್ಚಳಕ ತೋರಿ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

70+4ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಫಾಹೀಸ್‌, ಸೌತ್‌ ಇಂಡಿಯಾ ತಂಡದ ಸಂಭ್ರಮಕ್ಕೆ ಕಾರಣರಾದರು.

ಬಿ.ಟಿ.ಎಂ. ಎಫ್‌ಸಿ ಮತ್ತು ಬ್ಲಿಟ್ಜ್‌ ಎಫ್‌ಸಿ ನಡುವಣ ‘ಎ’ ಗುಂಪಿನ ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.

ಬ್ಲಿಟ್ಜ್‌ ತಂಡದ ಡೇವಿಡ್‌, ಎರಡನೇ ನಿಮಿಷದಲ್ಲಿ ಗೋಲು ಗಳಿಸಿದರು. ಹೀಗಾಗಿ ತಂಡ 1–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದಲ್ಲಿ ಬಿ.ಟಿ.ಎಂ. ತಂಡದ ಲೋಹಿತ್‌ (68ನೇ ನಿಮಿಷ) ಗೋಲು ಹೊಡೆದು ಸಮಬಲಕ್ಕೆ ಕಾರಣರಾದರು.

ಗುರುವಾರ ನಡೆಯುವ ‘ಎ’ ಗುಂಪಿನ ಪಂದ್ಯಗಳಲ್ಲಿ ಬೆಂಗಳೂರು ಮಾರ್ಸ್‌ ಎಫ್‌ಸಿ ಮತ್ತು ಗೋವನ್ಸ್‌ ಎಫ್‌ಸಿ; ಸಾಯ್‌ ಎಫ್‌ಸಿ ಮತ್ತು ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !