ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್: ಬೆಂಗಳೂರು ಯುನೈಟೆಡ್‌ ಜಯಭೇರಿ

Last Updated 19 ಫೆಬ್ರುವರಿ 2021, 15:57 IST
ಅಕ್ಷರ ಗಾತ್ರ

ಬೆಂಗಳೂರು: ಹರ್ಷಿತ ಮತ್ತು ಪೂರ್ಣಿಮ ಗಳಿಸಿದ ತಲಾ ಎರಡು ಗೋಲುಗಳ ಬಲದಿಂದ ಬೆಂಗಳೂರು ಯುನೈಟೆಡ್ ತಂಡ ಭರ್ಜರಿ ಗೆಲುವು ದಾಖಲಿಸಿತು. ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ರಾಜ್ಯ ಮಹಿಳಾ ಲೀಗ್‌ನ ಶುಕ್ರವಾರದ ಪಂದ್ಯದಲ್ಲಿ ಈ ತಂಡ ಬೆಂಗಳೂರು ಸಾಕರ್ ಗ್ಯಾಲಕ್ಸಿಯನ್ನು 6–0 ಗೋಲುಗಳ ಅಂತರದಲ್ಲಿ ಮಣಿಸಿತು.

19ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಯುನೈಟೆಡ್‌ಗೆ ಸ್ಯಾನ್‌ಫಿದಾ ಮುನ್ನಡೆ ತಂದುಕೊಟ್ಟರು. ಹರ್ಷಿತ 22 ಮತ್ತು 31ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. 44ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಅಮೂಲ್ಯ ಮುನ್ನಡೆ ಹೆಚ್ಚಿಸಿದರು. 80ನೇ ನಿಮಿಷ ಮತ್ತು ಇಂಜುರಿ ಅವಧಿಯಲ್ಲಿ ಪೂರ್ಣಿಮಾ ಎರಡು ಗೋಲುಗಳನ್ನು ಗಳಿಸಿ ಎದುರಾಳಿ ತಂಡಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದರು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬ್ರೇವ್ಸ್ ತಂಡ ಸುಶ್ಮಿತಾ ಜಾಧವ್ (21ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಇಂಡಿಯನ್ ಫುಟ್‌ಬಾಲ್ ಫ್ಯಾಕ್ಟರಿ ತಂಡವನ್ನು ಮಣಿಸಿತು. ಮಾತೃ ಪ್ರತಿಷ್ಠಾನ ಮತ್ತು ಕಿಕ್‌ಸ್ಟಾರ್ಟ್ ಎಫ್‌ಸಿ, ರೆಬೆಲ್ಸ್ ವಿಮೆನ್ ಎಫ್‌ಸಿ ಮತ್ತು ಸ್ಲ್ಯಾಂಜರ್ಸ್‌ ಬೆಳಗಾಂ ಎಫ್‌ಸಿ ತಂಡಗಳು 1–1 ಗೋಲಿನಿಂದ ಡ್ರಾ ಮಾಡಿಕೊಂಡವು.

ಕಿಕ್‌ಸ್ಟಾರ್ಟ್‌ಗಾಗಿ ಕಾವ್ಯ (11ನೇ ನಿ, ಪೆನಾಲ್ಟಿ) ಮತ್ತು ಮಾತೃ ಪ್ರತಿಷ್ಠಾನಕ್ಕಾಗಿ ಕರುಣಾ (14ನೇ ನಿ, ಪೆನಾಲ್ಟಿ) ಗೋಲು ಗಳಿಸಿದರೆ ಸ್ಲ್ಯಾಂಜರ್ಸ್‌ ಪರ ಅಂಜಲಿ (53ನೇ ನಿ) ಮತ್ತು ರೆಬಲ್ಸ್‌ಗಾಗಿ ನಿಸೀಲಿಯಾ (57ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಎರಡು ದಿನ ವಿರಾಮವಿದ್ದು ಸೋಮವಾರ ‌‌ಬೆಳಿಗ್ಗೆ ಒಂಬತ್ತು ಗಂಟೆಗೆ ರೆಬೆಲ್ಸ್ ಮತ್ತು ಬೆಂಗಳೂರು ಸಾಕರ್ಸ್‌ ಗ್ಯಾಲಕ್ಸಿ, 11 ಗಂಟೆಗೆ ಬೆಂಗಳೂರು ಯುನೈಟೆಡ್ ಮತ್ತು ಮಾತೃ ಪ್ರತಿಷ್ಠಾನ ತಂಡಗಳು ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT