ಗುರುವಾರ , ಡಿಸೆಂಬರ್ 5, 2019
22 °C

ಬಿಡಿಎಫ್‌ಎ ಲೀಗ್‌ ಫುಟ್‌ಬಾಲ್‌: ಬೆಂಗಳೂರು ಗನ್ನರ್ಸ್‌ ತಂಡಕ್ಕೆ ಭರ್ಜರಿ ಜಯ

Published:
Updated:

ಬೆಂಗಳೂರು: ಬೆಂಗಳೂರು ಗನ್ನರ್ಸ್ ತಂಡವು ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಶುಕ್ರವಾರ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಎದುರು 4–0ಯಿಂದ ಜಯಿಸಿತು. ಇಲ್ಲಿನ ಆರ್‌ಬಿಎಎನ್‌ಎಂಎಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ವಿಜಯ್‌ (28, 56ನೇ ನಿಮಿಷ), ಅರಿವೊಲಿ (33ನೇ ನಿ.) ಹಾಗೂ ವಿಷ್ಣು (64ನೇ ನಿ.) ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ಹಾಗೂ ಯಂಗ್‌ ಚಾಲೆಂಜರ್ಸ್ 1–1ರ ಡ್ರಾ ಧಿಸಿದವು. ಆರ್‌ಡಬ್ಲ್ಯುಎಫ್‌ ಪರ ರಾಜೇಶ್‌ 70+3ನೇ ನಿಮಿಷ ಹಾಗೂ ಎದುರಾಳಿ ತಂಡದ ಆಯುಷ್‌ 17ನೇ ನಿಮಿಷ ಗೋಲು ಹೊಡೆದರು.

ಪ್ರತಿಕ್ರಿಯಿಸಿ (+)