ಬುಧವಾರ, ನವೆಂಬರ್ 13, 2019
25 °C

ಬಿಡಿಎಫ್‌ಎ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಯಂಗ್‌ ಚಾಲೆಂಜರ್ಸ್‌ಗೆ ಜಯ

Published:
Updated:
Prajavani

ಬೆಂಗಳೂರು: ಸಂಘಟಿತ ಆಟವಾಡಿದ ಯಂಗ್‌ ಚಾಲೆಂಜರ್ಸ್ ತಂಡ, ಬಿಡಿಎಫ್‌ ಫುಟ್‌ಬಾಲ್‌ ಪಂದ್ಯದಲ್ಲಿ ಬಿಟಿಎಮ್‌ ಎಫ್‌ಸಿ ತಂಡವನ್ನು ಬುಧವಾರ 4–0ದಿಂದ ಮಣಿಸಿತು.

ವಿಜೇತ ತಂಡದ ಪರ ಯೋಗಿತ್‌ (23ನೇ ನಿಮಿಷ), ಜೋಸೆಫ್‌ (32ನೇ ನಿಮಿಷ), ಟೋನಿ (59ನೇ ನಿಮಿಷ) ಹಾಗೂ ಆಯುಷ್‌ (66ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಸೂರ್ಯ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಎಫ್‌ಸಿ ಡೆಕ್ಕನ್‌ ತಂಡವು ಆರ್‌ಡಬ್ಲ್ಯುಎಫ್‌ ಎಫ್‌ಸಿ ಎದುರು 6–0ಯಿಂದ ಜಯಿಸಿತು. ಡೆಕ್ಕನ್‌ ಪರ ಕೆ.ಡಿ. ಅರವಿಂದ್‌ (1ನೇ ನಿಮಿಷ), ಆಫ್ತಾಬ್‌ (10ನೇ ನಿಮಿಷ), ಸೂರ್ಯ (43, 48, 51ನೇ ನಿಮಿಷ), ಸ್ಟೀವನ್‌ (67ನೇ ನಿಮಿಷ) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಎಡಿಇ ಎಫ್‌ಸಿಯು ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿಯೊಂದಿಗೆ 1–1 ಡ್ರಾ ಸಾಧಿಸಿತು.

ಎಡಿಇ ಪರ ಬಿಬಿನ್‌ ಬಾಬು 83ನೇ ನಿಮಿಷ ಗೋಲು ಬಾರಿಸಿದರೆ, ಸ್ಟೂಡೆಂಟ್ಸ್‌ ಯೂನಿಯನ್‌ ಪರ ರೂಪ್‌ ದಾಸ್‌ 55ನೇ ನಿಮಿಷ ಗೋಲು ಹೊಡೆದರು. 

ಪ್ರತಿಕ್ರಿಯಿಸಿ (+)