ಶನಿವಾರ, ಜನವರಿ 18, 2020
25 °C

ಫುಟ್‌ಬಾಲ್: ಓಜೋನ್ ಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಗಳಿಸಿದ ಒಂದೊಂದು ಗೋಲುಗಳ ನೆರವಿನಿಂದ ಓಜೋನ್ ಎಫ್‌ಸಿ ತಂಡ ಜಯಭೇರಿ ಮೊಳಗಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಈ ತಂಡ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿಯನ್ನು 2–0ಯಿಂದ ಮಣಿಸಿತು.

17ನೇ ನಿಮಿಷದಲ್ಲಿ ಅಲೋಷಿಯಸ್ ಗಳಿಸಿದ ಗೋಲಿನ ಮೂಲಕ ಓಜೋನ್ ತಂಡ ಮುನ್ನಡೆ ಸಾಧಿಸಿತು. 80ನೇ ನಿಮಿಷದಲ್ಲಿ ಶಹಜಾಸ್ ಟಿ ಚೆಂಡನ್ನು ಗುರಿ ತಲುಪಿಸಿ ಮುನ್ನಡೆಯನ್ನು ಹೆಚ್ಚಿಸಿದರು.

ಶುಕ್ರವಾರ ವಿಶ್ರಾಂತಿ ದಿನವಾಗಿದ್ದು ಶನಿವಾರ ಮಧ್ಯಾಹ್ನ 1.30ಕ್ಕೆ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಮತ್ತು ಎಜಿಒಆರ್‌ಸಿ ಎಫ್‌ಸಿ ತಂಡಗಳು ಸೆಣಸಲಿವೆ. 3.30ಕ್ಕೆ ಬೆಂಗಳೂರು ಇಂಡಿಪೆಂಡೆನ್ಸ್‌ ಎಫ್‌ಸಿ ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್ ನಡುವೆ ಪಂದ್ಯ ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು