ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಕಿಂಗ್‌ಸ್ಲೆ ‘ಹ್ಯಾಟ್ರಿಕ್‌’ ಗೋಲು

7
ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌

ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಕಿಂಗ್‌ಸ್ಲೆ ‘ಹ್ಯಾಟ್ರಿಕ್‌’ ಗೋಲು

Published:
Updated:

ಬೆಂಗಳೂರು: ಕಿಂಗ್‌ಸ್ಲೆ ಗಳಿಸಿದ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ 8–1 ಗೋಲುಗಳಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಕಿಂಗ್‌ಸ್ಲೆ 4, 65 ಮತ್ತು 75ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ರಮೇಶ್‌ ಕುಮಾರ್‌ (65 ಮತ್ತು 77ನೇ ನಿಮಿಷ), ಅಹ್ಮದ್‌ (33), ಶಿವಕುಮಾರ್‌ (40) ಮತ್ತು ಜಗನ್ನಾಥ್‌ (79ನೇ ನಿಮಿಷ) ತಲಾ ಒಮ್ಮೆ ಚೆಂಡನ್ನು ಗುರಿ ತಲುಪಿಸಿದರು.

ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ವಿಜಯ್‌ 11ನೇ ನಿಮಿಷದಲ್ಲಿ ಗೋಲು ಹೊಡೆದು ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ದಿನದ ಇನ್ನೊಂದು ಹಣಾಹಣಿಯಲ್ಲಿ ಸೌತ್‌ ಯುನೈಟೆಡ್‌ ಎಫ್‌ಸಿ 6–0 ಗೋಲುಗಳಿಂದ ಸಿಐಎಲ್‌ ಎಫ್‌ಸಿ ತಂಡದ ಎದುರು ಗೆದ್ದಿತು.

ಸೌತ್‌ ಯುನೈಟೆಡ್‌ ತಂಡದ ಕಿಶೋರ್‌ (26 ಮತ್ತು 62ನೇ ನಿಮಿಷ), ರಿಜ್ವಾನ್‌ (68 ಮತ್ತು 78ನೇ ನಿಮಿಷ) ತಲಾ ಎರಡು ಗೋಲು ಬಾರಿಸಿದರು.

ಮಣಿ (3) ಮತ್ತು ಥಾಪಾ (90ನೇ ನಿ.) ತಲಾ ಒಂದು ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !