ಬಿಡಿಯು ಫುಟ್‌ಬಾಲ್‌ ಕ್ಲಬ್‌ ಉದ್ಘಾಟನೆ

4

ಬಿಡಿಯು ಫುಟ್‌ಬಾಲ್‌ ಕ್ಲಬ್‌ ಉದ್ಘಾಟನೆ

Published:
Updated:

ಬೆಂಗಳೂರು: ಅನುಭವಿ ಕೋಚ್ ಶರತ್‌ ಕಾಮತ್‌ ಸ್ಥಾಪಿಸಿರುವ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ನ (ಬಿಡಿಯುಎಫ್‌ಸಿ) ಉದ್ಘಾಟನಾ ಕಾರ್ಯಕ್ರಮ ನಗರದ ಆಕ್ಟೇವ್‌ ಸೂಟ್ಸ್‌ ಹೋಟೆಲ್‌ನಲ್ಲಿ ಸೋಮವಾರ ನಡೆಯಿತು.

ಇದೇ ವೇಳೆ ತಂಡದ ‍ನೂತನ ‍ಪೋಷಕನ್ನು ಅನಾವರಣ ಮಾಡಲಾಯಿತು.

‘ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸದುದ್ದೇಶದಿಂದ 10 ವರ್ಷಗಳ ಹಿಂದೆ ಬಿಡಿಯುಎಫ್‌ಸಿ ಅಕಾಡೆಮಿಯನ್ನು ಆರಂಭಿಸಿದ್ದೆವು. ಇದರಲ್ಲಿ ತರಬೇತುಗೊಂಡವರು ರಾಜ್ಯ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಡಿ ಮಿಂಚಬೇಕು ಎಂಬುದು ನಮ್ಮ ಆಸೆ. ಈ ಕಾರಣದಿಂದಲೇ ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡವನ್ನು ಕಟ್ಟಿದ್ದೇವೆ. ನಮ್ಮ ತಂಡ ಮುಂಬರುವ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿದೆ’ ಎಂದು ಶರತ್‌ ಹೇಳಿದರು.

‘ನಮ್ಮ ಅಕಾಡೆಮಿಯ 10 ಮಂದಿ ಆಟಗಾರರು ತಂಡದಲ್ಲಿದ್ದಾರೆ. ಜೊತೆಗೆ ಏಳು ದಿನಗಳ ಕಾಲ ಟ್ರಯಲ್ಸ್‌ ನಡೆಸಿ ಕೆಲ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ. ಹೈ ಪರ್ಫಾರ್ಮೆನ್ಸ್‌ ಕೋಚ್‌ ಅಭಿಷೇಕ್‌ ಜಗನ್‌, ಬಯೋ ಮೆಕ್ಯಾನಿಕ್ಸ್‌ ತಜ್ಞ ಬದ್ರಿನಾಥ್‌ ರಾವ್‌ ಮತ್ತು ಮುಖ್ಯ ಕೋಚ್ ಎಸ್‌.ಪಿ.ಶಾಜಿ ಅವರು ಬಲಿಷ್ಠ ತಂಡ ಕಟ್ಟಲು ಸಹಕರಿಸುತ್ತಿದ್ದಾರೆ. ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ತಂಡದಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬರಲಿದೆ’ ಎಂದು ಶರತ್‌ ವಿಶ್ವಾಸ ವ್ಯಕ್ತಪಡಿಸಿದರು.

ತಂಡದ ಮುಖ್ಯ ಕೋಚ್‌ ಶಾಜಿ ಮಾತನಾಡಿ ‘ ಈ ಹಿಂದೆ ಸೇನೆಯ ಹಲವು ತಂಡಗಳಿಗೆ ತರಬೇತಿ ನೀಡಿದ ಅನುಭವ ನನಗಿದೆ. ಹೀಗಾಗಿ ಆಟಗಾರರಲ್ಲಿ ಶಿಸ್ತು ಬೆಳೆಸಲು ಆದ್ಯತೆ ನೀಡಿದ್ದೇನೆ. ನಮ್ಮ ತಂಡ ಮುಂಬರುವ ಎಲ್ಲಾ ಟೂರ್ನಿಗಳಲ್ಲೂ ಉತ್ತಮ ಸಾಮರ್ಥ್ಯ ತೋರುವ ನಂಬಿಕೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !