ಸೆಮಿ ಫೈನಲ್‌ಗೆ ಬೆಲ್ಜಿಯಂ: ಬ್ರೆಜಿಲ್‌ಗೆ ಆಘಾತ

7

ಸೆಮಿ ಫೈನಲ್‌ಗೆ ಬೆಲ್ಜಿಯಂ: ಬ್ರೆಜಿಲ್‌ಗೆ ಆಘಾತ

Published:
Updated:
ಬ್ರೆಜಿಲ್‌–ಬೆಲ್ಜಿಯಂ ನಡುವಿನ ಪಂದ್ಯದಲ್ಲಿ ಗೋಲು ಗಳಿಸುವ ಪ್ರಯತ್ನದಲ್ಲಿ ನೇಮರ್‌

ಕಜಾನ್‌: ಶುಕ್ರವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಎರಡನೇ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಬೆಲ್ಜಿಯಂ ತಂಡ 2–1 ಗೋಲುಗಳ ಅಂತರದಿಂದ ಬಲಿಷ್ಠ ಬ್ರೆಜಿಲ್‌ ತಂಡವನ್ನು ಮಣಿಸಿತು. 

ಕಜಾನ್‌ ಅರೆನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಬೆಲ್ಜಿಯಂ ಸೆಮಿ ಫೈನಲ್‌ ಪ್ರವೇಶಿಸಿತು. ಮಂಗಳವಾರ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಸೆಮಿ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಸೆಣಸಲಿದೆ.

’ಇದೊಂದು ಕಹಿಯಾದ ಅನುಭವ. ಈ ಸೋಲನ್ನು ಸ್ವೀಕರಿಸುವುದೇ ಕಠಿಣವಾಗಿದೆ’ ಎಂದು ಬ್ರೆಜಿಲ್‌ ತಂಡದ ಕೋಚ್‌ ಟೈಟ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಸತತ 15 ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಬೀರಿದ್ದ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಬ್ರೆಜಿಲ್‌, ಕೆಂಪು ದೈತ್ಯರ ತಂಡದ ಮುಂದೆ ಸೋಲು ಅನುಭವಿಸಬೇಕಾಯಿತು. 

ಪಂದ್ಯದ 13ನೇ ನಿಮಿಷದಲ್ಲಿ ಬ್ರೆಜಿಲ್‌ನ ಗೋಲ್‌ಕೀಪರ್‌ ಫರ್ನಾಂಡಿನೋ ತಡೆಗೋಡೆ ದಾಟಿದ ಚೆಂಡು ಬೆಲ್ಜಿಯಂಗೆ ಮೊದಲ ಗೋಲು ಗಳಿಸಿಕೊಟ್ಟಿತು. ನಂತರ 31ನೇ ನಿಮಿಷದಲ್ಲಿ ಮತ್ತೊಂದು ಗೋಲು ಬೆಲ್ಜಿಯಂಗೆ ಒಲಿಯಿತು. ಮಧ್ಯಂತರ ಅವಧಿ ಕಳೆದರೂ ಬ್ರೆಜಿಲ್‌ ಗಳಿಕೆ ಶೂನ್ಯ. 76ನೇ ನಿಮಿಷದಲ್ಲಿ ರಿನಾಟೊ ಅಗಸ್ಟೊ ಮೂಲಕ ಬ್ರೆಜಿಲ್‌ ಮೊದಲ ಗೋಲು ಗಳಿಸಿತು. ಬ್ರೆಜಿಲ್‌ ಇಪ್ಪತ್ತಕ್ಕೂ ಹೆಚ್ಚು ಬಾರಿ ಗೋಲು ಗಳಿಸುವ ಪ್ರಯತ್ನದಲ್ಲಿ ವಿಫಲಗೊಂಡಿತು.

ಪಂದ್ಯಕ್ಕೆ ಐದು ನಿಮಿಷಗಳ ಹೆಚ್ಚುವರಿ ಸಮಯ ದೊರೆತರೂ ಬ್ರೆಜಿಲ್‌ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನೇಮರ್‌ ಪ್ರಯತ್ನ ಫಲ ನೀಡದೆ ತಂಡ ಕ್ವಾರ್ಟರ್‌ ಫೈನಲ್‌ ಹಂತದಲ್ಲಿಯೇ ನಿರ್ಗಮಿಸಬೇಕಾಯಿತು. 

 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !