ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಟೂರ್ನಿ: ನಿರಾಸೆ ಸುಳಿಯಿಂದ ಮೇಲೇಳುವುದೇ ಬೆಂಗಳೂರು?

ಜಮ್ಸೆಡ್‌ಪುರ ಸವಾಲು
Last Updated 19 ಡಿಸೆಂಬರ್ 2021, 13:03 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಸತತ ಆರು ಪಂದ್ಯಗಳಲ್ಲಿ ಗೆಲುವು ಕಾಣದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜಮ್ಶೆಡ್‌ಪುರ ಎಫ್‌ಸಿ ಸವಾಲು ಎದುರಿಸಲಿದೆ. ಇಲ್ಲಿನ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಕಳೆದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನಾಯಕತ್ವದ ತಂಡವು ಎಟಿಕೆ ಮೋಹನ್ ಬಾಗನ್‌ (ಎಟಿಕೆಎಂಬಿ) ತಂಡದೊಂದಿಗೆ 3–3ರಿಂದ ಸಮಬಲ ಸಾಧಿಸಿತ್ತು. ಈ ಪಂದ್ಯದಲ್ಲಿ ತೋರಿದ ಉತ್ತಮ ಸಾಮರ್ಥ್ಯವು‌ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಬಲಿಷ್ಠ ಜಮ್ಶೆಡ್‌ಪುರ ಸವಾಲು ಮೀರಬೇಕಾದರೆ ತಂಡ ಬಿಎಫ್‌ಸಿ ಬೆವರು ಹರಿಸಬೇಕಾಗುತ್ತದೆ.

ಸದ್ಯ ಬೆಂಗಳೂರು ತಂಡವು 11 ತಂಡಗಳಿರುವ ಟೂರ್ನಿಯ ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ ಜಮ್ಶೆಡ್‌ಪುರ ಆರು ಪಂದ್ಯಗಳಿಂದ 11 ಪಾಯಿಂಟ್ಸ್ ಕಲೆಹಾಕಿದ್ದು, ಮೂರನೇ ಸ್ಥಾನದಲ್ಲಿದೆ.

ಚೆಟ್ರಿ ಪಡೆಯಲ್ಲಿ ಪ್ರಿನ್ಸ್ ಇಬಾರ ಉತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಸ್ವತಃ ಚೆಟ್ರಿ ಅವರು ಲಯ ಕಂಡುಕೊಳ್ರುಳವುದು ಕಳವಳಕ್ಕೆ ಕಾರಣವಾಗಿದೆ.

ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ್ದ ಗ್ರೆಗ್ ಸ್ಟೀವರ್ಟ್‌ಜಮ್ಶೆಡ್‌ಪುರ ತಂಡದ ಶಕ್ತಿಯಾಗಿದ್ದಾರೆ. ಸ್ಕಾಟ್ಲೆಂಡ್‌ನ ಈ ಆಟಗಾರ ಕಳೆದ ಆರು ಪಂದ್ಯಗಳಲ್ಲಿ ನಾಲ್ಕು ಬಾರಿ ಅಸಿಸ್ಟ್‌ ಮಾಡಿದ್ದಾರೆ. ಅವರನ್ನು ನಿಯಂತ್ರಿಸಲು ಬೆಂಗಳೂರು ಶ್ರಮಿಸಬೇಕಿದೆ.

ಮುಖಾಮುಖಿ

ಪಂದ್ಯಗಳು 8

ಜಮ್ಶೆಡ್‌ಪುರ ಜಯ 4

ಬೆಂಗಳೂರು ಜಯ 2

ಡ್ರಾ 2

ಮುಖಾಮುಖಿಯಲ್ಲಿ ಗೋಲು

ಜಮ್ಶೆಡ್‌ಪುರ 12

ಬೆಂಗಳೂರು 9

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೊರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT