ಕೋಲ್ಕತ್ತ: ಬ್ರಯನ್ ಸ್ಯಾಂಚೇಜ್ ಅವರ ‘ಗೋಲ್ ಡಬಲ್’ ಬಲದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಇಂಟರ್ ಕಾಶಿ ವಿರುದ್ಧ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.

ಕಿಶೋರ್ ಭಾರತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್ಸಿ ತಂಡವು 3–1ರಿಂದ ಇಂಟರ್ ಕಾಶಿಯನ್ನು ಪರಾಭವಗೊಳಿಸಿತು.

ಬಿಎಫ್ಸಿ ಆಟಗಾರರು ಆರಂಭದಿಂದಲೇ ತಮ್ಮ ಚುರುಕಾದ ಆಟದ ಮೂಲಕ ಮುನ್ನಡೆ ಸಾಧಿಸುವ ಲಕ್ಷಣ ತೋರಿದ್ದರು. ಅದಕ್ಕೆ ತಕ್ಕಂತೆ ಆಶಿಕ್ ಕುರುಣಿಯನ್ 20ನೇ ನಿಮಿಷದಲ್ಲಿ ಗೋಲು ಗಳಿಸಿದರು. ತಂಡಕ್ಕೆ 1–0 ಮುನ್ನಡೆ ನೀಡಿದರು.

ಆದರೆ ಇದಕ್ಕೆ ತಿರುಗೇಟು ನೀಡುವಲ್ಲಿ ಎದುರಾಳಿ ಬಳಗ ಯಶಸ್ವಿಯಾಯಿತು. ಅಲ್ಫ್ರೆಡ್ ಪ್ಲನಾಸ್ (38ನೇ ನಿ) ಅವರು ಗೋಲು ಗಳಿಸಿ ಸಮಬಲ ಸಾಧಿಸಿದರು.

ನಂತರದ ಅರ್ಧ ತಾಸಿನ ಆಟದಲ್ಲಿ ಉಭಯ ತಂಡಗಳ ಆಟಗಾರರು ಜಿದ್ದಾಜಿದ್ದಿ ನಡೆಸಿದರು. ಆದರೆ ಮತ್ತೊಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಅವಧಿಯಲ್ಲಿ ಬಿಎಫ್ಸಿ ತಂಡವೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಆದರೆ ಇಂಟರ್ ಕಾಶಿಯ ರಕ್ಷಣಾ ಪಡೆಯು ಉತ್ತಮವಾಗಿ ಆಡಿತು.

ಆದರೆ ಅರ್ಜೆಂಟೀನಾದ ಮಿಡ್ಫೀಲ್ಡರ್ ಬ್ರಯನ್ ಸ್ಯಾಂಚೇಸ್ 69ನೇ ನಿಮಿಷದಲ್ಲಿ ಕಾಶಿಯ ರಕ್ಷಣಾ ಗೋಡೆಯನ್ನು ದಾಟಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಬೆಂಗಳೂರಿಗೆ ಮುನ್ನಡೆ ಲಭಿಸಿತು. ಈ ಹಂತದಲ್ಲಿ ಕಾಶಿ ತಂಡದ ಆಟಗಾರರು ಸಮಬಲ ಸಾಧಿಸಲು ತುರುಸಿನ ಪೈಪೋಟಿ ನೀಡಿದರು. ಆದರೆ ಬಿಎಫ್ಸಿ ತಂಡದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ದಿಟ್ಟ ಆಟದಿಂದಾಗಿ ಕಾಶಿ ಬಳಗವು ನಿರಾಶೆ ಅನುಭವಿಸಿತು.

ಇಂಜುರಿ ಸಮಯದಲ್ಲಿ ಮತ್ತೆ ತಮ್ಮ ಕಾಲ್ಚಳಕ ತೋರಿದ ಬ್ರಯನ್ (90+8ನಿ) ಗೋಲು ಗಳಿಸಿದರು.

ಬಿಎಫ್ಸಿ ತಂಡವು ಇದುವರೆಗೆ ಒಟ್ಟು 6 ಪಂದ್ಯಗಳಲ್ಲಿ ಆಡಿ, 3ರಲ್ಲಿ ಜಯಿಸಿದೆ. ಒಂದರಲ್ಲಿ ಸೋತಿದೆ. ಎರಡರಲ್ಲಿ ಡ್ರಾ ಮಾಡಿಕೊಂಡಿದೆ. ಒಟ್ಟು 11 ಅಂಕಗಳು ತಂಡದ ಖಾತೆಯಲ್ಲಿವೆ.

ಇಂಟರ್ ಕಾಶಿ ತಂಡವು 6 ಪಂದ್ಯಗಳಲ್ಲಿ 1 ಮಾತ್ರ ಜಯಿಸಿದೆ. 2 ಡ್ರಾ ಆಗಿವೆ. ಉಳಿದ ಪಂದ್ಯಗಳಲ್ಲಿ ಸೋತಿದೆ. ಒಟ್ಟು 5 ಅಂಕಗಳನ್ನು ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.