ಕೋಲ್ಕತ್ತ (ಪಿಟಿಐ): ಬೆಂಗಳೂರು ಎಫ್ಸಿ ತಂಡವು ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ನ ಪಂದ್ಯದಲ್ಲಿ 3–3 ಗೋಲುಗಳಿಂದ ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿತು.

ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಸುನಿಲ್ ಚೆಟ್ರಿ ಪಡೆಯು ಗೆಲುವಿನ ಹೊಸ್ತಿಲಲ್ಲಿತ್ತು. ಆದರೆ, ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಆತಿಥೇಯ ತಂಡದ ಆಂಟನ್ ಸೋಜ್ಬರ್ಗ್ ಕಾಲ್ಚಳಕ ಮೆರೆದರು. ಹೆಚ್ಚುವರಿ ಅವಧಿಯಲ್ಲಿ ಅವರು ಚೆಂಡನ್ನು ಗುರಿ ಸೇರಿಸಿದ್ದರಿಂದ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು.

ಬೆಂಗಳೂರು ಎಫ್ಸಿ ಪರ ಆಶಿಕ್ ಕುರುಣಿಯನ್ (12ನೇ ನಿಮಿಷ), ಸುರೇಶ್ ಸಿಂಗ್ ವಾಂಗ್ಜಮ್ (39ನೇ) ಮತ್ತು ರೆಯಾನ್ ವಿಲಿಯಮ್ಸ್ (71ನೇ ) ಗೋಲು ದಾಖಲಿಸಿದರು. ಈಸ್ಟ್ ಬೆಂಗಾಲ್ ತಂಡದ ಅನ್ವರ್ ಅಲಿ (21ನೇ), ಸೌಲ್ ಕ್ರೆಸ್ಪೋ (55ನೇ) ಮತ್ತು ಆ್ಯಂಟನ್ ಸೋಜ್ಬರ್ಗ್ (90+7ನೇ) ಚೆಂಡನ್ನು ಗುರಿ ಸೇರಿಸಿದರು. ಬೆಂಗಾಲ್ ತಂಡದ ಮಿಗುಯೆಲ್ ಫಿಗುಯೆರಾ ಅವರಿಗೆ 24ನೇ ನಿಮಿಷದಲ್ಲಿ ‘ರೆಡ್ ಕಾರ್ಡ್’ ದರ್ಶನವಾಗಿ ಮೈದಾನದಿಂದ ಹೊರಹೋದರು.

ಬಿಎಫ್ಸಿ ತಂಡವು ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. 9 ಪಂದ್ಯಗಳ ಪೈಕಿ ನಾಲ್ಕು ಗೆಲುವು, ಮೂರು ಡ್ರಾ ಮತ್ತು ಎರಡು ಸೋಲಿನೊಂದಿಗೆ ಒಟ್ಟು 15 ಅಂಕ ಸಂಪಾದಿಸಿದೆ. ಎಂಟು ಪಂದ್ಯಗಳಿಂದ ಇಷ್ಟೇ ಅಂಕ ಗಳಿಸಿರುವ ಬೆಂಗಾಲ್ ತಂಡವು ಮೂರನೇ ಸ್ಥಾನದಲ್ಲಿದೆ.

ಬೆಂಗಳೂರು ಎಫ್ಸಿ ತಂಡವು ಇದೇ 25ರಂದು ಕಂಠೀರವ ಕ್ರೀಡಾಂಗಣದಲ್ಲಿ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ತಂಡವನ್ನು ಎದುರಿಸಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-51-1863679950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.