ಸೋಮವಾರ, ಮೇ 17, 2021
23 °C

ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ ತಂಡ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಐದನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಗೆ ಮಂಗಳವಾರ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಪ್ರಕಟಿಸಲಾಗಿದೆ.

ಅನುಭವಿ ಆಟಗಾರ ಸುನಿಲ್‌ ಚೆಟ್ರಿ ಅವರು 25 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿ ಐದು ಮಂದಿ ಹೊಸಬರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು, ಡಿಫೆಂಡರ್‌ ರಾಹುಲ್‌ ಭೆಕೆ, ಮಿಕು ಮತ್ತು ಹರ್ಮನ್‌ಜ್ಯೋತ್‌ ಖಾಬ್ರಾ ಅವರಂತಹ ಅನುಭವಿಗಳೂ ತಂಡದಲ್ಲಿದ್ದಾರೆ. ಮಿಕು ಅವರು ಹೋದ ಆವೃತ್ತಿಯಲ್ಲಿ 20 ಗೋಲು ದಾಖಲಿಸಿ ಮಿಂಚಿದ್ದರು.

ಹೋದ ವರ್ಷ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದ್ದ ಬೆಂಗಳೂರಿನ ತಂಡ ರನ್ನರ್ಸ್‌ ಅಪ್‌ ಪ್ರಶಸ್ತಿ ಗಳಿಸಿತ್ತು.

ಸೆಪ್ಟೆಂಬರ್‌ 30 ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಈ ಬಾರಿಯ ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ಚೆಟ್ರಿ ಪಡೆ ಹಾಲಿ ಚಾಂಪಿಯನ್‌ ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಸೆಣಸಲಿದೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಗುರುಪ್ರೀತ್‌ ಸಿಂಗ್‌ ಸಂಧು, ಸೋರಮ್‌ ಪೋಯೆರಿ ಅನಗಾಂಬ ಮತ್ತು ಆದಿತ್ಯ ಪಾತ್ರಾ. ಡಿಫೆಂಡರ್ಸ್‌: ರಾಹುಲ್‌ ಭೆಕೆ, ಅಲ್ಬರ್ಟ್‌ ಸೆರಾನ್‌, ಸೈರುವತ್‌ ಕೀಮಾ, ಜುನಾನ್‌ ಗೊಂಜಾಲೆಜ್‌, ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ, ರಿನೊ ಆ್ಯಂಟೊ, ನಿಶು ಕುಮಾರ್‌, ಅಶೀರ್‌ ಅಖ್ತರ್‌ ಮತ್ತು ಗುರುಸಿಮ್ರತ್‌ ಸಿಂಗ್‌ ಗಿಲ್‌.

ಮಿಡ್‌ಫೀಲ್ಡರ್ಸ್‌: ಎರಿಕ್‌ ಪಾರ್ಟಲು, ಕೀನ್‌ ಫ್ರಾನ್ಸಿಸ್‌ ಲೆವಿಸ್‌, ದಿಮಾಸ್‌ ಡೆಲ್ಗಾಡೊ, ವಿದ್ಯಾನಂದ ಸಿಂಗ್‌, ಬೊಯಿಥಾಂಗ್‌ ಹಾವೊಕಿಪ್‌, ಫ್ರಾನ್ಸಿಸ್ಕೊ ಹರ್ನಾಂಡೆಜ್‌, ಅಜಯ್‌ ಚೆಟ್ರಿ ಮತ್ತು ಅಲ್ತಮಸ್‌ ಸೈಯದ್‌. ಫಾರ್ವರ್ಡ್ಸ್‌: ನಿಕೊಲಸ್‌ ಲ್ಯಾಡಿಸ್ಲಾವೊ ಫೆಡೊರ್‌ (ಮಿಕು), ಸುನಿಲ್‌ ಚೆಟ್ರಿ (ನಾಯಕ), ಥಾಂಗ್‌ಕೊಶಿಯೆಮ್‌ ಹಾವೊಕಿಪ್‌, ಉದಾಂತ್‌ ಸಿಂಗ್‌ ಮತ್ತು ಚೆಂಚೊ ಗ್ಯಾಲ್ಟೆಶೆನ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು