ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಗೆ ಫ್ರಾನ್ಸಿಸ್ಕೊ

Last Updated 6 ಜುಲೈ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಸ್ಪೇನ್‌ನ ಫ್ರಾನ್ಸಿಸ್ಕೊ ಕ್ಸಿಸ್ಕೊ ಹರ್ನಾಂಡೆಜ್‌ ಮಾರ್ಕೊಸ್‌ ಅವರೊಂದಿಗೆ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ವಿಷಯವನ್ನು ಮಂಗಳವಾರ ಬಿಎಫ್‌ಸಿ ಫ್ರಾಂಚೈಸ್‌ ಖಚಿತಪಡಿಸಿದೆ.

‌ಪಲ್ಮಾದಲ್ಲಿ ಜನಿಸಿರುವ ಹರ್ನಾಂಡೆಜ್‌, ಎಳವೆಯಿಂದಲೇ ಫುಟ್‌ಬಾಲ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಅವರು ಮಲ್ಲೊರ್ಕಾ‘ಬಿ’, ರೆಯುಸ್‌, ಅಟ್ಲೆಟಿಕೊ ಬಲೀರೆಸ್‌ ಸೇರಿದಂತೆ ಹಲವು ಕ್ಲಬ್‌ಗಳ ಪರ ಆಡಿದ ಅನುಭವ ಹೊಂದಿದ್ದಾರೆ.

ಹರ್ನಾಂಡೆಜ್‌ ಅವರು ಬಿಎಫ್‌ಸಿ ‍ಪರ ಆಡಲಿರುವ ಸ್ಪೇನ್‌ನ ಒಂಬತ್ತನೇ ಆಟಗಾರ ಆಗಿದ್ದಾರೆ.

‘ಬೆಂಗಳೂರು ಎಫ್‌ಸಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ಐಎಸ್‌ಎಲ್‌ ಸೇರಿದಂತೆ ಇತರ ಟೂರ್ನಿಗಳಲ್ಲಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಶ್ರಮಿಸುತ್ತೇನೆ’ ಎಂದು ಹರ್ನಾಂಡೆಜ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT