ಬೆಂಗಳೂರು: ಹಾಲಿ ಆವೃತ್ತಿಯಲ್ಲಿ ತವರಿನಾಚೆ ಅಜೇಯ ದಾಖಲೆ ಹೊಂದಿರುವ ಬೆಂಗಳೂರು ಎಫ್ಸಿ ತಂಡವು ಶನಿವಾರದ ಇಂಡಿಯನ್ ಸೂಪರ್ ಲೀಗ್ನ ಪಂದ್ಯದಲ್ಲಿ ಜಮ್ಶೆಡ್ಪುರ ಎಫ್ಸಿ ತಂಡವನ್ನು ಎದುರಿಸಲಿದೆ.

ಈ ಬಾರಿಯ ಆವೃತ್ತಿಯಲ್ಲಿ ಪ್ಲೇ ಆಫ್ ಮತ್ತು ಫೈನಲ್ ಪಂದ್ಯ ಇರುವುದಿಲ್ಲ. 14 ತಂಡಗಳು ಲೀಗ್ ಹಂತದಲ್ಲಿ 13 ಪಂದ್ಯಗಳನ್ನು ಆಡಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಚಾಂಪಿಯನ್ ಆಗಲಿದೆ. 10 ಪಂದ್ಯಗಳಿಂದ 21 ಅಂಕ ಗಳಿಸಿರುವ ಈಸ್ಟ್ ಬೆಂಗಾಲ್ ತಂಡವು ಸದ್ಯ ಅಗ್ರಸ್ಥಾನದಲ್ಲಿದೆ.

ಬಿಎಫ್ಸಿ ಮತ್ತು ಜಮ್ಶೆಡ್ಪುರ ತಂಡಗಳು ಈಗಾಗಲೇ 11 ಪಂದ್ಯಗಳಲ್ಲಿ ಆಡಿದ್ದು, ಅವುಗಳಿಗೆ ಇನ್ನೆರಡು ಪಂದ್ಯಗಳು ಮಾತ್ರ ಉಳಿದಿವೆ. 11 ಪಂದ್ಯಗಳಿಂದ 21 ಅಂಕ ಗಳಿಸಿರುವ ಜಮ್ಶೆಡ್ಪುರ ತಂಡವು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ರಶಸ್ತಿ ರೇಸ್ನಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿ ಸುತ್ತಿದೆ. ಆ ತಂಡದ ಚೊಚ್ಚಲ ಕಿರೀಟದ ಕನಸಿಗೆ ಅಡ್ಡಿಯಾಗಲು ಬಿಎಫ್ಸಿ ಸಜ್ಜಾಗಿದೆ.

ಸುನಿಲ್ ಚೆಟ್ರಿ ಬಳಗವು 11 ಪಂದ್ಯಗಳಿಂದ 17 ಅಂಕ (4 ಗೆಲುವು, 5 ಡ್ರಾ, 2 ಸೋಲು) ಗಳಿಸಿದ್ದು, ಪ್ರಶಸ್ತಿಯ ಆಸೆ ಕಮರಿದೆ. ಸದ್ಯ ಏಳನೇ ಸ್ಥಾನದಲ್ಲಿರುವ ತಂಡವು ಮುಂದಿನ ಎರಡೂ ಪಂದ್ಯಗಳನ್ನು ಗೆದ್ದು, ಅಂಕಪಟ್ಟಿ ಯಲ್ಲಿ ಉತ್ತಮ ಸ್ಥಾನದೊಂದಿಗೆ ಅಭಿಯಾನ ಮುಗಿಸುವ ಛಲದಲ್ಲಿದೆ.

ಬಿಎಫ್ಸಿ ತಂಡವು ತನ್ನ ಕೊನೆಯ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಡ್ರಾ ಸಾಧಿಸಿದ್ದರೆ, ಒಂದರಲ್ಲಿ ಸೋತಿದೆ. ಜಮ್ಶೆಡ್ಪುರದ ಜೆಆರ್ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯುವ ಹಣಾಹಣಿಯಲ್ಲಿ ಗೆಲುವಿನ ಹಳಿಗೆ ಮರಳುವತ್ತ ಚಿತ್ತ ಹರಿಸಿದೆ.

ಐಎಸ್ಎಲ್ನಲ್ಲಿ ಉಭಯ ತಂಡಗಳು ಈತನಕ 18 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ 9 ಬಾರಿ ಬಿಎಫ್ಸಿ ತಂಡ ಜಯ ಗಳಿಸಿದೆ. ಐದು ಸಲ ಜಮ್ಶೆಡ್ಪುರ ಗೆಲುವು ಸಾಧಿಸಿದ್ದರೆ, ಉಳಿದ ನಾಲ್ಕು ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿವೆ.

ಬೆಂಗಳೂರು ತಂಡದ ಸ್ಟಾರ್ ಆಟಗಾರರಾದ ಆಶಿಕ್ ಕುರುಣಿಯನ್ ಮತ್ತು ನಿಖಿಲ್ ಪೂಜಾರಿ ಅವರು ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಅವರು ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

‘ನಿಖಿಲ್ ಚೇತರಿಸಿಕೊಳ್ಳಲು ಕನಿಷ್ಠ 10 ದಿನ ಬೇಕಾಗಬಹುದು ಮತ್ತು ಆಶಿಕ್ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ಮುಖ್ಯಕೋಚ್ ಪೆಪ್ ಮುನೋಝ್ ಮಾಹಿತಿ ನೀಡಿದ್ದಾರೆ.

‘ನಾವು ಮುಂದಿನ ಪಂದ್ಯದಲ್ಲಿ ರಕ್ಷಣೆ ಮತ್ತು ಆಕ್ರಮಣ ಎರಡು ವಿಭಾಗಗಳಲ್ಲೂ ಸುಧಾರಿಸಬೇಕಿದೆ. ಗೋಲು ದಾಖಲಿಸುವ ಅವಕಾಶಗಳನ್ನು ನಿಖರವಾಗಿ ಬಳಸಿಕೊಳ್ಳುವಲ್ಲಿ ಹೆಚ್ಚು ಆಕ್ರಮಣಕಾರಿಯಾಗಬೇಕಿದೆ’ ಎಂದು ಪೆಪ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1834724801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.