ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ನ ಹಾಲಿ ಆವೃತ್ತಿಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಬೆಂಗಳೂರು ಎಫ್ಸಿ ತಂಡವು ತವರಿನಲ್ಲಿ ತನ್ನ ಕೊನೆಯ ಪಂದ್ಯಕ್ಕೆ ಸಜ್ಜಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ಹಣಾಹಣಿಯಲ್ಲಿ ಬಿಎಫ್ಸಿ ತಂಡವು ಬಲಿಷ್ಠ ಮುಂಬೈ ಸಿಟಿ ತಂಡವನ್ನು ಎದುರಿಸಲಿದೆ.

ಕಳೆದ ವಾರ ಕೋಲ್ಕತ್ತದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ 3-3 ಅಂತರದಿಂದ ಬಿಎಫ್ಸಿ ಡ್ರಾ ಸಾಧಿಸಿತ್ತು. ಆತಿಥೇಯ ತಂಡದ ಆ್ಯಂಟನ್ ಸೋಜ್ಬರ್ಗ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿದ್ದರು. ಇದೀಗ ತವರಿನಲ್ಲಿ ಪೂರ್ಣ ಮೂರು ಅಂಕ ಗಳಿಸುವತ್ತ ಸುನಿಲ್ ಚೆಟ್ರಿ ಪಡೆ ಚಿತ್ತ ಹರಿಸಿದೆ.

ಮುಂಬೈ ಸಿಟಿ ತಂಡದ ಎಂಟು ಪಂದ್ಯಗಳ ಅಜೇಯ ಓಟಕ್ಕೆ ಎಫ್ಸಿ ಗೋವಾ ತಂಡವು ತಡೆ ಹಾಕಿತ್ತು. ಕಳೆದ ಪಂದ್ಯದಲ್ಲಿ ಮುಂಬೈ ತಂಡವು 0-2 ಅಂತರದಿಂದ ಗೋವಾಕ್ಕೆ ಮಣಿದಿದ್ದು, ಇದೀಗ ಗೆಲುವಿನ ಹಳಿಗೆ ಮರಳುವ ಪ್ರಯತ್ನದಲ್ಲಿದೆ.

ಪೆಪ್ ಮುನೋಝ್ ಅವರು ಬಿಎಫ್ಸಿ ತಂಡದ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ಒಂದು ಪಂದ್ಯ ಡ್ರಾ ಆಗಿತ್ತು. ಮತ್ತೊಂದು ಪಂದ್ಯದಲ್ಲಿ ತಂಡ ಸೋತಿದೆ. ಅವರ ಮಾರ್ಗ ದರ್ಶನದಲ್ಲಿ ತಂಡ ಮೊದಲ ಗೆಲುವನ್ನು ಎದುರು ನೋಡುತ್ತಿದೆ.

ಬಿಎಫ್ಸಿ ತಂಡವು 9 ಪಂದ್ಯಗಳಲ್ಲಿ 15 ಅಂಕಗಳೊಂದಿಗೆ (ನಾಲ್ಕು ಗೆಲುವು, ಮೂರು ಡ್ರಾ ಮತ್ತು ಎರಡು ಸೋಲು) ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿವೆ. ಮುಂಬೈ ತಂಡವು ಅಷ್ಟೇ ಪಂದ್ಯಗಳಿಂದ 18 ಅಂಕಗಳೊಂದಿಗೆ (5 ಗೆಲುವು, ಮೂರು ಡ್ರಾ, 1 ಸೋಲು) ಮೂರನೇ ಸ್ಥಾನದಲ್ಲಿದೆ.

‘ಅಂಕಪಟ್ಟಿಯಲ್ಲಿ ನಮಗಿಂತ ಮೇಲಿರುವ ತಂಡದ ವಿರುದ್ಧ ಆಡುತ್ತಿದ್ದೇವೆ. ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾ ಯಕವಾಗಿದೆ. ತವರಿನಲ್ಲಿ ತಂಡವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ’ ಎಂದು ಎಂದು ಮುನೋಝ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-4-444696973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.