ಭುವನೇಶ್ವರ: ತವರಿನಾಚೆ ಅಜೇಯ ಓಟ ಮುಂದುವರಿಸುವ ಛಲದಲ್ಲಿರುವ ಬೆಂಗಳೂರು ಎಫ್ಸಿ ತಂಡವು ಸೋಮ ವಾರ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯದಲ್ಲಿ ಒಡಿಶಾ ಎಫ್ಸಿ ತಂಡವನ್ನು ಎದುರಿಸಲಿದೆ.

ಗೋವಾದ ಪಂಡಿತ್ ಜವಾಹರ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಸುನಿಲ್ ಚೆಟ್ರಿ ಪಡೆಯು ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದೆ. ತವರಿನಾಚೆ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿದ್ದರೆ, ಒಂದರಲ್ಲಿ ಡ್ರಾ ಸಾಧಿಸಿದೆ.

ಬಿಎಫ್ಸಿ ತಂಡವು ಕಂಠೀರವ ಕ್ರೀಡಾಂಗಣದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್ಸಿ ವಿರುದ್ಧ ಗೋಲಿಲ್ಲದೆ ಡ್ರಾ ಸಾಧಿಸಿತ್ತು. ಒಡಿಶಾ ತಂಡವು ತನ್ನ ಕೊನೆಯ ಹಣಾಹಣಿಯಲ್ಲಿ 0–3ರಿಂದ ಈಸ್ಟ್ ಬೆಂಗಾಲ್ ವಿರುದ್ಧ ಪರಾಭವಗೊಂಡಿತ್ತು.

ಐಎಸ್ಎಲ್ ಇತಿಹಾಸದಲ್ಲಿ ಉಭಯ ತಂಡಗಳು ಈತನಕ 16 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಉಳಿದ 14 ಪಂದ್ಯಗಳಲ್ಲಿ ತಲಾ ಏಳು ಬಾರಿ ಜಯ ಸಾಧಿಸುವ ಮೂಲಕ ಎರಡೂ ತಂಡಗಳು ಸಮಬಲದ ದಾಖಲೆ ಹೊಂದಿವೆ.

ಪ್ರಸ್ತುತ ಅಂಕಪಟ್ಟಿಯಲ್ಲಿ ಪ್ರವಾಸಿ ಬೆಂಗಳೂರು ತಂಡವು 15 ಅಂಕಗಳೊಂದಿಗೆ (4 ಗೆಲುವು, 4 ಡ್ರಾ, 2 ಸೋಲು) ಆರನೇ ಸ್ಥಾನದಲ್ಲಿದ್ದರೆ, ಆತಿಥೇಯ ಒಡಿಶಾ ತಂಡ ಕೇವಲ 6 ಅಂಕಗಳೊಂದಿಗೆ (1 ಗೆಲುವು, 3 ಡ್ರಾ, 5 ಸೋಲು) 13ನೇ ಸ್ಥಾನದಲ್ಲಿದೆ.

ಬೆಂಗಳೂರು ಎಫ್ಸಿಯ ಮುಖ್ಯ ಕೋಚ್ ಪೆಪ್ ಮುನೋಝ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಮೊದಲ ಗೆಲುವಿನ ಹುಡುಕಾಟದಲ್ಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಡ್ರಾಗೊಂಡರೆ, ಒಂದರಲ್ಲಿ ಸೋತಿದೆ.

‘ಒಡಿಶಾ ಎಫ್ಸಿ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಎದುರಾಳಿಗಳಿಗೆ ಪೆಟ್ಟು ನೀಡುವ ತಂತ್ರಗಳು ಅವರ ಬಳಿಯಿವೆ. ಅದಕ್ಕೆ ನಾವೂ ತಯಾರಿ ನಡೆಸಿದ್ದೇವೆ’ ಎಂದು ತಂಡದ ಗೋಲ್ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಹೇಳಿದ್ದಾರೆ.

ಬೆಂಗಳೂರು ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದ್ದು, ಸ್ನಾಯು ಸೆಳೆತದಿಂದಾಗಿ ನಿಖಿಲ್ ಪೂಜಾರಿ ಮತ್ತು ಆಶಿಕ್ ಕುರುಣಿಯನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-979407487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.