ಬೆಂಗಳೂರು: ಬ್ರಿಯಾನ್ ಸ್ಯಾಂಚೆಜ್ ಗಳಿಸಿದ ಗೋಲಿನಿಂದಾಗಿ ಬೆಂಗಳೂರು ಎಫ್ಸಿ ತಂಡವು ಸೋಮವಾರ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ 1–1ರಿಂದ ಒಡಿಶಾ ಎಫ್ಸಿ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.

ಗೋವಾದ ಪಂಡಿತ್ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಒಡಿಶಾ ಪರ ರಹೀಂ ಅಲಿ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಬ್ರಿಯಾನ್ ಅವರು 48ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಈ ಪಂದ್ಯವೂ ಡ್ರಾ ಆಗುವುದರೊಂದಿಗೆ ಸುನಿಲ್ ಚೆಟ್ರಿ ಪಡೆಯ ತವರಿನಾಚೆ ಅಜೇಯ ಓಟ ಮುಂದುವರಿಯಿತು.

ಆರಂಭದಿಂದಲೇ ಉಭಯ ತಂಡಗಳ ಆಟಗಾರರು ತುರುಸಿನ ಪೈಪೋಟಿ ನಡೆಸಿದರು. ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಕಷ್ಟು ಪ್ರಯತ್ನ ನಡೆಸಿದರು. 34ನೇ ನಿಮಿಷದಲ್ಲಿ ರಹೀಂ ಅಮೋಘವಾಗಿ ಕಾಲ್ಚಳಕ ಮೆರೆದು, ಒಡಿಶಾ ತಂಡಕ್ಕೆ 1–0 ಮುನ್ನಡೆ ಒದಗಿಸಿದರು. ನಂತರ ಬಿಎಫ್ಸಿ ಆಟಗಾರರು ಸಮಬಲ ಸಾಧಿಸಲು ಹೋರಾಟ ಮುಂದುವರಿಸಿದರು.

ದ್ವಿತೀಯಾರ್ಧ ಆರಂಭಗೊಂಡ ಮೂರೇ ನಿಮಿಷದಲ್ಲಿ ಬಿಎಫ್ಸಿ ತಂಡಕ್ಕೆ ಪೆನಾಲ್ಟಿ ಅವಕಾಶ ದೊರಕಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಬ್ರಿಯಾನ್ ಚೆಂಡನ್ನು ನಿಖರವಾಗಿ ಗುರಿ ಸೇರಿಸಿದರು. ಇದರಿಂದ ಗೋಲು ಸಮಬಲಗೊಂಡಿತು. ನಂತರ ಗೆಲುವಿನ ಗೋಲು ದಾಖಲಿಸಲು ಎರಡೂ ತಂಡಗಳು ಪೈಪೋಟಿ ನಡೆಸಿದವು. ಆದರೆ, ಯಾರಿಗೂ ಫಲ ಸಿಗಲಿಲ್ಲ.

11 ಪಂದ್ಯಗಳಿಂದ 17 ಅಂಕ (4 ಗೆಲುವು, 5 ಡ್ರಾ, 2 ಸೋಲು) ಗಳಿಸಿರುವ ಬಿಎಫ್ಸಿ ಲೀಗ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಮುಂದುವರಿದಿದೆ. ಒಡಿಶಾ ತಂಡ 10 ಪಂದ್ಯಗಳಿಂದ 7 ಅಂಕಗಳೊಂದಿಗೆ (1 ಗೆಲುವು, 4 ಡ್ರಾ, 5 ಸೋಲು) 13ನೇ ಸ್ಥಾನದಲ್ಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-175601210

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.