ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿ: ಸೆಮಿ ಮೇಲೆ ಬಿಎಫ್‌ಸಿ ಕಣ್ಣು

ಶನಿವಾರ ಒಡಿಶಾ ಎಫ್‌ಸಿ ಸವಾಲು
Last Updated 9 ಸೆಪ್ಟೆಂಬರ್ 2022, 13:59 IST
ಅಕ್ಷರ ಗಾತ್ರ

ಕೋಲ್ಕತ್ತ: ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ನಾಲ್ಕರ ಘಟ್ಟದ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಶನಿವಾರ ಒಡಿಶಾ ಎಫ್‌ಸಿ ಸವಾಲು ಎದುರಾಗಿದೆ.

ಇಲ್ಲಿನ ಕಿಶೋರ ಭಾರತಿ ಕ್ರೀಡಾಂಗಣದಲ್ಲಿ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

ಎ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಬಿಎಫ್‌ಸಿ ಜಯ ಸಾಧಿಸಿದೆ. ಇದರೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದೆ. ಎರಡು ಪಂದ್ಯಗಳನ್ನು ಇದೇ ಕ್ರೀಡಾಂಗಣದಲ್ಲಿ ಆಡಿರುವುದರಿಂದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಗೆಲುವಿನ ಛಲದಲ್ಲಿದೆ. ಒಡಿಶಾ ಡಿ ಗುಂಪಿನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಗಳಿಸಿತ್ತು.

ಉಭಯ ತಂಡಗಳು ಫಾರ್ವರ್ಡ್ ಆಟಗಾರರನ್ನು ಹೆಚ್ಚು ಅವಲಂಬಿಸಿವೆ. ಗುಂಪು ಹಂತದಲ್ಲಿ ಬಿಎಫ್‌ಸಿಯ ಎಂಟು ಗೋಲುಗಳ ಪೈಕಿ ಏಳು ಗೋಲುಗಳನ್ನು ಸ್ಟ್ರೈಕರ್‌ಗಳಾದ ಚೆಟ್ರಿ, ರಾಯ್‌ ಕೃಷ್ಣ ಮತ್ತು ಶಿವ ಶಕ್ತಿ ಹಂಚಿಕೊಂಡಿದ್ದು ಈ ಪಂದ್ಯದಲ್ಲಿಯೂ ಅದೇ ರೀತಿಯ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ಪಂದ್ಯ ಆರಂಭ: ಸಂಜೆ 6

ನೇರ ಪ್ರಸಾರ: ಸ್ಪೋರ್ಟ್ಸ್ 18, ವೂಟ್‌ ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT