ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ–ಬಾರ್ಸಿಲೋನಾ ಹಣಾಹಣಿ

Last Updated 27 ಜುಲೈ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿಯ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಸ್ಪೇನ್‌ನ ಪ್ರತಿಷ್ಠಿತ ಬಾರ್ಸಿಲೋನಾ ಎಫ್‌ಸಿ ಹಾಗೂ ವಿಲ್ಲೇರಿಯಲ್‌ ತಂಡಗಳ ಎದುರು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

‘ಅಭಿಮಾನಿಗಳಿಗೆ ಇದೊಂದು ದೊಡ್ಡ ಸುದ್ದಿ. ನಮ್ಮ ತಂಡವು ಸ್ಪೇನ್‌ಗೆ ತೆರಳುತ್ತಿದ್ದೆ. ಅಲ್ಲಿ ಬಾರ್ಸಿಲೋನಾ ಬಿ ಹಾಗೂ ವಿಲ್ಲೇರಿಯಲ್‌ ಬಿ ತಂಡಗಳೊಂದಿಗೆ ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ’ ಎಂದು ಬಿಎಫ್‌ಸಿಯು ತನ್ನ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

ಇದಕ್ಕೆ ಪ್ರತಿಯಾಗಿ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ಬಾರ್ಸಿಲೋನಾ ಬಿ ತಂಡವು ‘ಬಾರ್ಸಿಲೋನಾಗೆ ನಿಮಗೆ ಸ್ವಾಗತ. ನಿಮ್ಮೊಂದಿಗೆ ಆಡಲು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದೆ.

ಬಿಎಫ್‌ಸಿಯ ಆಟಗಾರರು ಸದ್ಯ ಬಳ್ಳಾರಿಯ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆಸಿದ್ದಾರೆ. ತರಬೇತಿ ಕಾರ್ಯಾಗಾರ ಮುಗಿದ ನಂತರ ಆಟಗಾರರು ಸ್ಪೇನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT