ಬೆಂಗಳೂರು: ಅರುಣ್ ಕುಮಾರ್ ಕೆ. ಅವರು ಗಳಿಸಿದ ಐದು ಗೋಲುಗಳ ಬಲದಿಂದ ಅಂಶ್ ಸ್ಪೋರ್ಟ್ಸ್ ಕ್ಲಬ್ ತಂಡವು ಕೆಎಸ್ಎಫ್ಎ ಸಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ (ಉತ್ತರ ವಲಯ) ಪಂದ್ಯದಲ್ಲಿ ಸೋಮವಾರ 12–0ಯಿಂದ ಯಲಹಂಕ ಎಫ್ಸಿ ತಂಡವನ್ನು ಏಕಪಕ್ಷೀಯವಾಗಿ ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಪಂದ್ಯದಲ್ಲಿ ಅಂಶ್ ಸ್ಪೋರ್ಟ್ಸ್ ತಂಡದ ಆಟಗಾರರು ಆರಂಭದಿಂದಲೇ ಗೋಲಿನ ಸುರಿಮಳೆಗೈದರು. ಅರುಣ್ (10ನೇ, 32ನೇ, 33ನೇ, 35ನೇ ಹಾಗೂ 38ನೇ ನಿ.) ಐದು ಗೋಲಿನೊಂದಿಗೆ ಮಿಂಚಿದರೆ, ಶೀರಝ್ ಖಾನ್ (7ನೇ ಹಾಗೂ 12ನೇ ನಿ.), ರಿಹಾನ್ ಅನ್ವರ್ (14ನೇ ಹಾಗೂ 15ನೇ ನಿ.) ಮತ್ತು ಸಲೀಮ್ ಎ. (16ನೇ ಹಾಗೂ 17ನೇ ನಿ.) ತಲಾ ಎರಡು ಗೋಲು ಹೊಡೆದರು. ಇ.ಎ.ಅಶ್ವಿನ್ ಕೃಷ್ಣ (41ನೇ ನಿ.) ಒಂದು ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಬ್ಲ್ಯಾಕ್ ಮೂನ್ ಎಫ್ಸಿ ತಂಡವು 3–2ರಿಂದ ವಿಕ್ಟೋರಿಯಾ ಎಫ್ಸಿ ಬೆಂಗಳೂರು ತಂಡವನ್ನು ಸೋಲಿಸಿತು. ರೊನಾಲ್ಡೊ ಎಫ್ಸಿ ಬೆಂಗಳೂರು– ಪ್ಲೇ 365 ನಡುವಣ ಪಂದ್ಯವು ಗೋಲು ರಹಿತ ಡ್ರಾ ಆಯಿತು.

ಡಿ ಗುಂಪಿನ ಪಂದ್ಯದಲ್ಲಿ ಅಗ್ನಿಪುತ್ರ ಎಫ್ಸಿ– ಡಿ.ಬಿ. ಯುನೈಟೆಡ್ ಎಫ್ಸಿ ತಂಡಗಳು 1–1 ಡ್ರಾ ಸಾಧಿಸಿದವು. ಆರ್ವಿ ಎಫ್ಸಿ ಮತ್ತು ಬ್ಲ್ಯೂ ಡೈಮಂಡ್ ಎಫ್ಸಿ ತಂಡಗಳೂ 1–1 ಡ್ರಾ ಮಾಡಿಕೊಂಡವು.

ಡಿ ಡಿವಿಷನ್ ಲೀಗ್ ಪಂದ್ಯದಲ್ಲಿ ಎಲೀಟ್ ಸಾಕ್ಸರ್ ಸ್ಕೂಲ್ ತಂಡವು 7–1ರಿಂದ ಬ್ಲ್ಯೂಸ್ ಫುಟ್ಬಾಲ್ ಅಸೋಸಿಯೇಷನ್ ವಿರುದ್ಧ ಸುಲಭ ಜಯ ಸಾಧಿಸಿತು. ಆ್ಯಮಿ– ಆಲ್ಸ್ಟಾರ್ ನಡುವಣ ಪಂದ್ಯ 1–1 ಡ್ರಾ ಆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-21838281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.