ಬೆಂಗಳೂರು: ಅಧಿರನ್ ಅವರ ಹ್ಯಾಟ್ರಿಕ್ ಗೋಲುಗಳ ಬಲದಿಂದ ಆರ್.ಟಿ.ನಗರ ತಂಡವು ಸೋಮವಾರ ಆರಂಭಗೊಂಡ ಕೆಎಸ್ಎಫ್ಎ ಸಿ ಡಿವಿಷನ್ ಲೀಗ್ ಫುಟ್ಬಾಲ್ ಚಾಂಪಿಯನ್ಷಿಪ್ನ (ಉತ್ತರ ವಲಯ) ಪಂದ್ಯದಲ್ಲಿ 4–1ರಿಂದ ಬೆಂಗಳೂರು ಉತ್ತರ ತಂಡವನ್ನು ಸೋಲಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಆರ್.ಟಿ.ನಗರ ತಂಡದ ಅಧಿರನ್ (4ನೇ, 5ನೇ ಹಾಗೂ 10ನೇ ನಿ.) ಹ್ಯಾಟ್ರಿಕ್ ಸಾಧಿಸಿದರೆ, ಶೆಬಿನ್ (50ನೇ ನಿ.) ಒಂದು ಗೋಲು ಗಳಿಸಿದರು. ಬೆಂಗಳೂರು ಉತ್ತರ ತಂಡದ ಹಕೀಂ ಸಿ.ಎಚ್. (42ನೇ ನಿ.) ಏಕೈಕ ಗೋಲು ದಾಖಲಿಸಿದರು.

ಸಂಘಟಿತ ಆಟವಾಡಿದ ಸಮಂತ್ ಸ್ಪೋರ್ಟ್ಸ್ ಅಕಾಡೆಮಿ ತಂಡವು ಎ ಗುಂಪಿನ ಇನ್ನೊಂದು ಪಂದ್ಯದಲ್ಲಿ 5–0ಯಿಂದ ಜಿಆರ್ಕೆ ಯೂತ್ಸ್ ತಂಡವನ್ನು ಏಕಪಕ್ಷೀಯ ವಾಗಿ ಮಣಿಸಿತು. ಸಮಂತ್ ತಂಡದ ಕವಿಗುಹನಾಳ್ ಎಲ್ (25ನೇ ಹಾಗೂ 40ನೇ ನಿ.) ಅವಳಿ ಗೋಲು ಹೊಡೆದರೆ, ಶ್ರೀಕೃಷ್ಣನ್ ಕೆ. (12ನೇ ನಿ.), ರಾಘವಾಲ್ (37ನೇ ನಿ.) ಹಾಗೂ ಅಮಲ್ದೇವ್ ಕೆ.ಪಿ. (50ನೇ ನಿ.) ತಲಾ ಒಂದು ಗೋಲು ಹೊಡೆದರು. ಬೆಂಗಳೂರು ಬಾಲಾಹರ್ಕ ಎಫ್ಸಿ ಹಾಗೂ ರಾಮನ್ ಸ್ಪೋರ್ಟ್ಸ್ ಅಕಾಡೆಮಿ ನಡುವಣ ಪಂದ್ಯ ಗೋಲು ರಹಿತ ಡ್ರಾ ಆಯಿತು.

ಬಿ ಗುಂಪಿನ ಪಂದ್ಯಗಳಲ್ಲಿ ಆಲ್ಕೆಮಿ ಇಂಟರ್ನ್ಯಾಷನಲ್ ಫುಟ್ಬಾಲ್ ಅಸೋಸಿಯೇಶನ್ 6–0ಯಿಂದ ಸಾಂಬಾ ಎಫ್ಸಿ ವಿರುದ್ಧ ಹಾಗೂ ಚಿತ್ರದುರ್ಗ ಎಫ್ಸಿ ತಂಡವು 2–1ರಿಂದ ಗೋಪಾಲನ್ ಎಫ್ಸಿ ವಿರುದ್ಧ ಗೆದ್ದವು.

ಸ್ಟೇಡಿಯಂ ಎಫ್ಸಿ ಹಾಗೂ ಹಾಕ್ಸ್ ಯುನೈಟೆಡ್ ಸ್ಪೋರ್ಟ್ಸ್ ಫುಟ್ಬಾಲ್ ಅಸೋಸಿಯೇಶನ್ ನಡುವಣ ಪಂದ್ಯ 2–2 ಡ್ರಾ ಆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-4-603520773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.