ಬೆಂಗಳೂರು: ನಾಗರಾಜ್ ಹಾಗೂ ಸಂತೋಷ್ ಅವರು ಗಳಿಸಿದ ತಲಾ ಒಂದು ಗೋಲಿನ ಬಲದಿಂದ ಗೌತಮ ಎಫ್ಸಿ ತಂಡವು ಮಂಗಳವಾರ ಆರಂಭಗೊಂಡ ಬಿಡಿಎಫ್ಎ ಸಿ ಡಿವಿಷನ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ 2–1ರಿಂದ ಮಿಸಾಕಾ ಯುನೈಟೆಡ್ ಎಫ್ಸಿ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಗುಂಪಿನ ಪಂದ್ಯದಲ್ಲಿ ಗೌತಮ ತಂಡದ ನಾಗರಾಜ್ ಅವರು 16ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲನ್ನಾಗಿ ಪರಿವರ್ತಿಸಿ, ಆರಂಭಿಕ ಮುನ್ನಡೆ ತಂದುಕೊಟ್ಟರು. ಮಿಸಾಕಾ ತಂಡದ ವುಂಗಜಲೀನ್ 53ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲ ಸಾಧಿಸಿದರು. ಸಂತೋಷ್ (60+2ನೇ ನಿ.) ನಿರ್ಣಾಯಕ ಗೋಲು ಗಳಿಸಿ, ಗೌತಮ ತಂಡಕ್ಕೆ ಗೆಲುವು ತಂದಿತ್ತರು.

ಇನ್ನೊಂದು ಪಂದ್ಯದಲ್ಲಿ ಇಂದಿರಾನಗರ ಎಫ್ಸಿ ತಂಡವು 3–0ಯಿಂದ ಮಹಾರಾಜ ಸೋಷಿಯಲ್ಸ್ ತಂಡವನ್ನು ಸುಲಭವಾಗಿ ಮಣಿಸಿತು.

ಎರಡನೇ ಗುಂಪಿನ ಪಂದ್ಯಗಳಲ್ಲಿ ಜೆ ಸ್ಪೋರ್ಟ್ಸ್ ಎಫ್ಸಿ ತಂಡವು 2–1ಯಿಂದ ಟೌನ್ಕ್ಲಬ್ ಹೊಸಕೋಟೆ ಎಫ್ಸಿ ವಿರುದ್ಧ ಹಾಗೂ ಜೈಭಾರತ್ನಗರ ಎಫ್ಸಿ ತಂಡವು 5–0ಯಿಂದ ಬೆಂಗಳೂರು ಮುಸ್ಲಿಮ್ಸ್ ಎಫ್ಸಿ ವಿರುದ್ಧ ಜಯ ಸಾಧಿಸಿದವು.

ಮೂರನೇ ಗುಂಪಿನ ಪಂದ್ಯದಲ್ಲಿ ರೋವರ್ಸ್ ಎಫ್ಸಿ ತಂಡವು 2–0ಯಿಂದ ಕ್ವೀನ್ಸ್ ಎಫ್ಸಿ ವಿರುದ್ಧ ಮತ್ತು 515 ಆರ್ಮಿ ಬೇಸ್ ವರ್ಕ್ಶಾಪ್ ಎಫ್ಸಿ ತಂಡವು 1–0ಯಿಂದ ಓರಿಯಂಟಲ್ ಎಫ್ಸಿ ತಂಡದ ವಿರುದ್ಧ ಗೆಲುವು ಸಾಧಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-4-135543867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.