ಬೆಂಗಳೂರು: ಕೇರಳ ಬ್ಲಾಸ್ಟರ್ಸ್ ತಂಡವು ಇಂಡಿಯನ್ ಸೂಪರ್ ಲೀಗ್ನ ಹಾಲಿ ಟೂರ್ನಿಯಲ್ಲಿ ಶನಿವಾರ ಗೆಲುವಿನ ಖಾತೆ ತೆರೆಯಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ಆತಿಥೇಯ ಬೆಂಗಳೂರು ಎಫ್ಸಿ ತಂಡವನ್ನು ಮಣಿಸಿತು.

ಕೇರಳ ಬ್ಲಾಸ್ಟರ್ ತಂಡಕ್ಕೆ ಎಂಟು ಪಂದ್ಯಗಳಲ್ಲಿ ಇದು ಮೊದಲ ಗೆಲುವಾಗಿದೆ. ಬ್ಲಾಸ್ಟರ್ ಪರ ವಿಕ್ಟರ್ ಬೆರ್ಟೋಮಿಯು (61ನೇ ನಿಮಿಷ) ಮತ್ತು ಫ್ರಾನ್ಸಿಸ್ಕೊ ಫ್ಯೂಯಿಲಾಸಿಯರ್ (78ನೇ ನಿಮಿಷ) ಗೋಲು ದಾಖಲಿಸಿದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಸುನಿಲ್ ಚೆಟ್ರಿ ಪಡೆಗೆ ನಿರಾಸೆಯಾಯಿತು. ಎದುರಾಳಿ ತಂಡದ ಫಾಲೋ ಎನ್ಡಿಯಾಯೆ (27ನೇ ನಿಮಿಷ) ಉಡುಗೊರೆ ಗೋಲು ನೀಡಿದರೂ ಗೆಲುವು ದಕ್ಕಲಿಲ್ಲ.

ಉಭಯ ತಂಡಗಳ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದರು. ಎದುರಾಳಿಯ ರಕ್ಷಣಾವ್ಯೂಹ ಭೇದಿಸಲು ಸಾಕಷ್ಟು ಪ್ರಯತ್ನ ನಡೆಸಿದರು. 27ನೇ ನಿಮಿಷದಲ್ಲಿ ಬ್ಲಾಸ್ಟರ್ಸ್ ತಂಡದ ಎನ್ಡಿಯಾಯೆ ಮಾಡಿದ ಎಡವಟ್ಟು ಬಿಎಫ್ಸಿ ತಂಡಕ್ಕೆ ಮುನ್ನಡೆ ಒದಗಿಸಿತು. ಅದಾದ ಏಳು ನಿಮಿಷಕ್ಕೆ ಬಿಎಫ್ಸಿ ತಂಡದ ಬ್ರಿಯಾನ್ ಸ್ಯಾಂಚೆಜ್ ಅವರಿಗೆ ‘ರೆಡ್ ಕಾರ್ಡ್’ ದರ್ಶನವಾಗಿ ಹೊರನಡೆದರು.

ನಂತರದಲ್ಲಿ ಆತಿಥೇಯ ತಂಡದಲ್ಲಿ 10 ಆಟಗಾರರು ಮಾತ್ರ ಇದ್ದರು. ಇದರ ಲಾಭ ಪಡೆದ ಎದುರಾಳಿ ತಂಡವು ದ್ವಿತೀ ಯಾರ್ಧದಲ್ಲಿ ಎರಡು ಗೋಲು ಗಳಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-51-471403241

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.