ಬಿಎಫ್‌ಸಿಗೆ ಕಿಯಾ ಮೋಟರ್ಸ್‌ ಮುಖ್ಯ ಪ್ರಾಯೋಜಕತ್ವ

7

ಬಿಎಫ್‌ಸಿಗೆ ಕಿಯಾ ಮೋಟರ್ಸ್‌ ಮುಖ್ಯ ಪ್ರಾಯೋಜಕತ್ವ

Published:
Updated:
Deccan Herald

ಬೆಂಗಳೂರು:  ಕಿಯಾ ಮೋಟರ್ಸ್‌ ಸಂಸ್ಥೆ, ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ (ಬಿಎಫ್‌ಸಿ) ಮುಖ್ಯ ಪ್ರಾಯೋಜಕತ್ವ ವಹಿಸಿದೆ.

ಈ ಸಂಬಂಧ ಕಿಯಾ ಮೋಟರ್ಸ್‌ ಮತ್ತು ಬಿಎಫ್‌ಸಿ ನಡುವೆ ಒಪ್ಪಂದವಾಗಿದೆ. ನೂತನ ಒಡಂಬಡಿಕೆಯ ಅನುಸಾರ ಬಿಎಫ್‌ಸಿ ಆಟಗಾರರು 2021–22ರ ಋತುವಿನವರೆಗೆ ಕಿಯಾ ಮೋಟರ್ಸ್‌ ಲಾಂಛನ ಇರುವ ಪೋಷಾಕನ್ನು ಧರಿಸಲಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ನೂತನ ಜೆರ್ಸಿ ಅನಾವರಣ ಮಾಡಲಾಯಿತು.

ಸಮಾರಂಭದಲ್ಲಿ ಬಿಎಫ್‌ಸಿ ನಾಯಕ ಸುನಿಲ್‌ ಚೆಟ್ರಿ, ಎರಿಕ್‌ ಪಾರ್ಟಲು ಮತ್ತು ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !