ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆವಿ ಮಿಂಚು: ಬಿಎಫ್‌ಸಿ ಗೆಲುವು

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಗೋವಾ ಪರಾಭವ
Last Updated 26 ನವೆಂಬರ್ 2022, 18:43 IST
ಅಕ್ಷರ ಗಾತ್ರ

ಮಡಗಾಂವ್‌: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿತು.

ಶನಿವಾರ ಇಲ್ಲಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ 2–0ಯಿಂದ ಬಲಿಷ್ಠ ಎಫ್‌ಸಿ ಗೋವಾ ತಂಡಕ್ಕೆ ಸೋಲುಣಿಸಿತು.

ಎರಡು ಗೋಲು ಗಳಿಸಿದ ಜೆವಿ ಹೆರ್ನಾಂಡೆಜ್‌ ಗೆಲುವಿನ ರೂವಾರಿ ಎನಿಸಿದರು. 27ನೇ ನಿಮಿಷದಲ್ಲಿ ರಾಯ್‌ಕೃಷ್ಣ ನೆರವಿನಿಂದ ಚೆಂಡನ್ನು ಗುರಿ ಸೇರಿಸಿದ ಜೆವಿ, 57ನೇ ನಿಮಿಷದಲ್ಲೂ ಕಾಲ್ಚಳಕ ತೋರಿದರು. ಎರಡನೇ ಗೋಲು ಗಳಿಸಲು ಅವರಿಗೆ ಉದಾಂತ ಸಿಂಗ್‌ ನೆರವು ನೀಡಿದರು.

ಈ ಗೆಲುವಿನೊಂದಿಗೆ ಬಿಎಫ್‌ಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿತು. ಸದ್ಯ ತಂಡದ ಬಳಿ 7 ಪಾಯಿಂಟ್‌ಗಳಿವೆ. ಈ ಪಂದ್ಯಕ್ಕೂ ಮೊದಲು ತಂಡವು 10ನೇ ಸ್ಥಾನದಲ್ಲಿತ್ತು.

ಚೆಟ್ರಿ ಬಳಗವು ಮುಂದಿನ ಪಂದ್ಯದಲ್ಲಿ ಡಿಸೆಂಬರ್ 3ರಂದು ಎಟಿಕೆ ಮೋಹನ್ ಬಾಗನ್ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT