ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಎಫ್‌ಸಿಗೆ ಭರ್ಜರಿ ಜಯ

Last Updated 10 ಡಿಸೆಂಬರ್ 2021, 20:45 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್‌ ರಾಜು ಗಳಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 7–1 ಗೋಲುಗಳಿಂದ ಎಡಿಇ ಎಫ್‌ಸಿ ಎದುರು ಗೆದ್ದಿತು. ರಾಹುಲ್‌ ಎರಡನೇ ಮತ್ತು 36ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಲಾಲ್‌ ರಾಮ್ತುಲಂಗಾ (10ನೇ ನಿಮಿಷ), ಎಡ್ವಿನ್ ರೊಸಾರಿಯೊ (35ನೇ ನಿ.), ಲಾಲ್ ತಂಗ್‌ಲಿನಾ (51ನೇ ನಿ.) ಮತ್ತು ವೈಪೊಥೊಯಿ (90ನೇ ನಿ.) ವಿಜೇತ ತಂಡದ ಪರ ಗೋಲು ದಾಖಲಿಸಿದರು. ಒಂದು ಗೋಲು ‘ಉಡುಗೊರೆ‘ ಮೂಲಕ ಎಡಿಇ ತಂಡದ ಮಾಣಿಕ್ ಹಲ್ದಾರ್ ಮೂಲಕ ಬಂದಿತು.

ಎಡಿಇ ತಂಡದ ಸಚಿನ್‌ ಅವರು 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಿನಲ್ಲಿ ಪರಿವರ್ತಿಸಿದರು.ಮತ್ತೊಂದು ಪಂದ್ಯದಲ್ಲಿ ಜವಾಹರ್ ಯೂನಿಯನ್ ಎಫ್‌ಸಿ 4–0ರಿಂದ ಡೆಕ್ಕನ್ ಎಫ್‌ಸಿ ಎದುರು ಗೆದ್ದರೆ, ಎಫ್‌ಸಿ ಬೆಂಗಳೂರು ಯುನೈಟೆಡ್‌ 1–0ರಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ವಿರುದ್ಧ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT