ನೇಮರ್‌, ಫಿರ್ಮಿನೊ ಮಿಂಚು

7
ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಬ್ರೆಜಿಲ್‌ಗೆ ಜಯ

ನೇಮರ್‌, ಫಿರ್ಮಿನೊ ಮಿಂಚು

Published:
Updated:
Deccan Herald

ಈಸ್ಟ್‌ ರುದರ್‌ಫೋರ್ಡ್‌, ಅಮೆರಿಕ: ನೇಮರ್‌ ಮತ್ತು ರಾಬರ್ಟೊ ಫಿರ್ಮಿನೊ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ಬಲದಿಂದ ಬ್ರೆಜಿಲ್‌ ತಂಡ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಗೆದ್ದಿದೆ.

ಶನಿವಾರ ನಡೆದ ಹಣಾಹಣಿಯಲ್ಲಿ ಬ್ರೆಜಿಲ್‌ 2–0 ಗೋಲುಗಳಿಂದ ಆತಿಥೇಯ ಅಮೆರಿಕವನ್ನು ಸೋಲಿಸಿತು.

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ಸಾಂಬಾ ನಾಡಿನ ತಂಡ ಅನಂತರ ಆಡಿದ ಮೊದಲ ಪಂದ್ಯ ಇದಾಗಿದೆ.

ಮೆಟ್‌ಲೈಫ್‌ ಕ್ರೀಡಾಂಗಣದಲ್ಲಿ ನಡೆದ ಹೋರಾಟದ 11ನೇ ನಿಮಿಷದಲ್ಲಿ ಫಿರ್ಮಿನೊ ಗೋಲು ದಾಖಲಿಸಿದರು. 43ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ನೇಮರ್‌ ಚೆಂಡನ್ನು ಗುರಿ ಮುಟ್ಟಿಸಿದರು.

ಬೆಲ್ಜಿಯಂಗೆ ಭರ್ಜರಿ ಜಯ: ಗ್ಲಾಸ್ಗೊದಲ್ಲಿ ನಡೆದ ಸ್ಕಾಟ್ಲೆಂಡ್‌ ಎದುರಿನ ಪಂದ್ಯದಲ್ಲಿ ಬೆಲ್ಜಿಯಂ 4–0 ಗೋಲುಗಳಿಂದ ಜಯಭೇರಿ ಮೊಳಗಿಸಿತು.

ಈಡನಲ್‌ ಹಜಾರ್ಡ್‌ ಬಳಗ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. 28ನೇ ನಿಮಿಷದಲ್ಲಿ ರೊಮೆಲು ಲುಕಾಕು ತಂಡದ ಖಾತೆ ತೆರೆದರು. 46ನೇ ನಿಮಿಷದಲ್ಲಿ ಹಜಾರ್ಡ್‌ ಚೆಂಡನ್ನು ಗುರಿ ಸೇರಿಸಿ 2–0ರ ಮುನ್ನಡೆಗೆ ಕಾರಣರಾದರು.

ಮುಂಚೂಣಿ ವಿಭಾಗದ ಆಟಗಾರ ಬತ್ಸುವಾಯಿ 52 ಮತ್ತು 60ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇತರ ಪಂದ್ಯಗಳಲ್ಲಿ ಈಕ್ವೆಡರ್‌ 2–0ರಲ್ಲಿ ಜಮೈಕಾ ಎದುರೂ, ಕೊಲಂಬಿಯಾ 2–1ರಲ್ಲಿ ವೆನಿಜುವೆಲಾ ಮೇಲೂ, ಉರುಗ್ವೆ 4–1ರಲ್ಲಿ ಮೆಕ್ಸಿಕೊ ವಿರುದ್ಧವೂ, ಅರ್ಜೆಂಟೀನಾ 3–0ರಲ್ಲಿ ಗುವಾಟೆಮಾಲಾ ಮೇಲೂ ವಿಜಯಿಯಾದವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !