ಶುಕ್ರವಾರ, ನವೆಂಬರ್ 22, 2019
25 °C

ವಿದಾಯ ಘೋಷಿಸಿದ ಇಟೊ

Published:
Updated:

ಪ್ಯಾರಿಸ್‌ (ಎಎಫ್‌ಪಿ): ನಾಲ್ಕು ಬಾರಿ ‘ವರ್ಷದ ಆಫ್ರಿಕನ್‌ ಆಟಗಾರ’ ಪ್ರಶಸ್ತಿ ಪಡೆದಿದ್ದ ಕ್ಯಾಮರೂನ್‌ನ ಸಾಮ್ಯುಯೆಲ್‌ ಇಟೊ ಶನಿವಾರ ಫುಟ್‌ಬಾಲ್‌ ಆಟಕ್ಕೆ ವಿದಾಯ ಹೇಳಿದರು.

38 ವರ್ಷದ ಇಟೊ ವೃತ್ತಿ ಜೀವನದಲ್ಲಿ ಕ್ಯಾಮರೂನ್‌ ತಂಡದ ಜೊತೆಗೆ ಬಾರ್ಸಿಲೋನಾ, ಇಂಟರ್‌ ಮಿಲಾನ್‌ ಮತ್ತು ಚೆಲ್ಸಿ ಪರ ಆಡಿದ್ದರು. 2004 ರಿಂದ 09ರವರೆಗೆ ಬಾರ್ಸಿಲೋನಾ ಪರ ಅವರು ಅತಿ ಹೆಚ್ಚಿನ ಯಶಸ್ಸು ಗಳಿಸಿದ್ದರು.

ಕ್ಯಾಮರೂನ್‌ ತಂಡ ಎರಡು ಬಾರಿ ಆಫ್ರಿಕ ಕಪ್‌ ಆಫ್‌ ನೇಷನ್ಸ್‌ ಟ್ರೋಫಿ ಮತ್ತು 2000ರಲ್ಲಿ (ಸಿಡ್ನಿ) ಒಲಿಂಪಿಕ್‌ ಚಿನ್ನ ಗೆಲ್ಲುವಲ್ಲೂ ಇಟೊ ಪ್ರಮುಖ ಪಾತ್ರ ವಹಿಸಿದ್ದರು.

 

ಪ್ರತಿಕ್ರಿಯಿಸಿ (+)