ಸೋಮವಾರ, ಏಪ್ರಿಲ್ 6, 2020
19 °C

ಗಾಂಜಾ ಹೊಂದಿದ್ದ ಸಿಎಫ್‌ಸಿ ಸಿಬ್ಬಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಗಾಂಜಾ ಹೊಂದಿದ್ದ ಚೆನ್ನೈಯಿನ್ ಫುಟ್‌ಬಾಲ್ ಕ್ಲಬ್‌ ತಂಡದ ಸಿಬ್ಬಂದಿ ಗೋವಾ ‍ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಂಡದ ಅಧಿಕೃತ ಛಾಯಾಗ್ರಾಹಕ ಹಾಗೂ ಸಾಮಾಜಿಕ ತಾಣಗಳನ್ನು ನಿರ್ವಹಿಸುವ ಭೂಷಣ್ ಬಗಾಡಿಯಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಅವರಿಂದ 24 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಿಐಪಿ ಗೇಟ್‌ನಲ್ಲಿ ಬ್ಯಾಗ್ ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿತ್ತು. ಅವರನ್ನು ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೋಟ್ರಾಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಅಡಿ ಬಂಧಿಸಿದ್ದು ಅಂದೇ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಮಾರ್ಚ್ 14ರ ಶನಿವಾರ ರಾತ್ರಿ ಫತೋಡಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫೈನಲ್‌ ಪಂದ್ಯದ ಸಂದರ್ಭದಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು