ಸೋಮವಾರ, ಆಗಸ್ಟ್ 15, 2022
23 °C

ಚೆನ್ನೈಯಿನ್‌ ಎಫ್‌ಸಿಗೆ ಫನಾಯ್‌, ರೇಗನ್‌ ಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಎರಡು ಬಾರಿಯ ಚಾಂಪಿಯನ್‌‌ ಚೆನ್ನೈಯಿನ್‌ ಎಫ್‌ಸಿ (ಸಿಎಫ್‌ಸಿ) ತಂಡವು ಡಿಫೆಂಡರ್‌ಗಳಾದ ಲಾಲ್‌ಚುನ್ಮಾವಿಯಾ ಫನಾಯ್‌ ಹಾಗೂ ರೇಗನ್‌ಸಿಂಗ್ ಅವರನ್ನು ಸೇರಿಸಿಕೊಂಡಿದೆ.

‘ಮಿಜೋರಾಂನ 31 ವರ್ಷದ ಫನಾಯ್‌ ಹಾಗೂ ಮಣಿಪುರದ 29 ವರ್ಷದ ರೇಗನ್‌ ಅವರು ಫ್ರೀ ಟ್ರಾನ್ಸ್‌ಫರ್‌ ಆಧಾರದಲ್ಲಿ ತಂಡವನ್ನು ಸೇರಿದ್ದಾರೆ‘ ಎಂದು ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಫನಾಯ್‌ ಹಾಗೂ ರೇಗನ್‌ ಅವರು ಡಿಫೆಂಡಿಂಗ್‌ ವಿಭಾಗದಲ್ಲಿ ಬಲ ತುಂಬಲಿದ್ದಾರೆ. ತಂಡವು ಯಶಸ್ಸಿನತ್ತ ಸಾಗುವಂತೆ ಮಾಡಲು ಪ್ರಮುಖ ಪಾತ್ರ ವಹಿಸಲಿದ್ದಾರೆ‘ ಎಂದು ಸಿಎಫ್‌ಸಿಯ ಮುಖ್ಯ ಕೋಚ್‌ ಸಿಸಾಬಾ ಲಾಸ್ಲೊ ಹೇಳಿದ್ದಾರೆ.

ಫನಾಯ್‌ ಅವರು ಐ–ಲೀಗ್‌ ತಂಡ ಜೆಸಿಟಿ ಮೂಲಕ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ್ದರು. 2014–15ರಲ್ಲಿ ಫೆಡರೇಷನ್‌ ಕಪ್‌ ಹಾಗೂ 2015–16ರಲ್ಲಿ ಐ ಲೀಗ್‌ನಲ್ಲಿ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದ ಬೆಂಗಳೂರು ಎಎಫ್‌ಸಿ ತಂಡದಲ್ಲಿ ಆಡಿದ್ದರು.

ಭಾರತ ತಂಡದಲ್ಲೂ ಫನಾಯ್‌ ಆಡಿದ್ದಾರೆ. 2015ರಲ್ಲಿ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌) ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ ತಂಡದಲ್ಲಿ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು