ಶನಿವಾರ, ಜನವರಿ 23, 2021
25 °C

ಐಎಸ್ಎಲ್‌: ಹೈದರಾಬಾದ್‌ಗೆ ಮಣಿದ ಚೆನ್ನೈಯಿನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿಮ್: ಜೊಯೆಲ್ ಚಿಯಾನಿಸ್, ಹಾಲಿಚರಣ್ ನರ್ಜರೆ ಮತ್ತು ಜಾವೊ ಗಳಿಸಿದ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಭರ್ಜರಿ ಜಯ ಗಳಿಸಿತು. ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 4–1ರಲ್ಲಿ ಜಯಭೇರಿ ಮೊಳಗಿಸಿತು. ಚೆನ್ನೈಯಿನ್ ಪರ ಏಕೈಕ ಗೋಲು ಅನಿರುದ್ಧ ಥಾಪ ಗಳಿಸಿದರು.

ಮೊದಲಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಒಟ್ಟು ಐದು ಗೋಲುಗಳು ಹರಿದು ಬಂದವು. ಜೊಯೆಲ್‌ ಚಿಯಾನೀಸ್‌ 50ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಹೈದರಾಬಾದ್‌ ಖಾತೆ ತೆರೆದರು. ಮಿಡ್‌ಫೀಲ್ಡರ್‌ ಹಾಲಿಚರಣ್ 53 ಮತ್ತು 79ನೇ ನಿಮಿಷಗಳಲ್ಲಿ ಅಬ್ಬರಿಸಿದರು. ಮಿಡ್‌ಫೀಲ್ಡರ್‌ ಜಾವೋ ವಿಕ್ಟರ್‌ 74ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಚೆನ್ನೈಯಿನ್‌ ತಂಡದ ಗೋಲು 67ನೇ ನಿಮಿಷದಲ್ಲಿ ಮೂಡಿ ಬಂತು.

ಈ ಗೆಲುವಿನೊಂದಿಗೆ ಹೈದರಾಬಾದ್ ಎಫ್‌ಸಿ ತಲಾ ಮೂರು ಜಯ, ಮೂರು ಡ್ರಾ ಮತ್ತು ಮೂರು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಚೆನ್ನೈಯಿನ್ ಎಫ್‌ಸಿ ಒಂಬತ್ತು ಪಂದ್ಯಗಳಲ್ಲಿ 10 ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು