ಚಾಂಪಿಯನ್ನರಿಗೆ ಆರನೇ ಪಂದ್ಯದಲ್ಲೂ ನಿರಾಸೆ

7

ಚಾಂಪಿಯನ್ನರಿಗೆ ಆರನೇ ಪಂದ್ಯದಲ್ಲೂ ನಿರಾಸೆ

Published:
Updated:
Deccan Herald

ಚೆನ್ನೈ: ಹಾಲಿ ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡದ ಜಯ ಗಳಿಸುವ ಕನಸು ಸತತ ಆರನೇ ಬಾರಿಯೂ ನನಸಾಗಲಿಲ್ಲ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಎಫ್‌ಸಿ ಮುಂಬೈ ಸಿಟಿ ತಂಡಕ್ಕೆ 0–1ರಿಂದ ಮಣಿಯಿತು.

ಈ ಮೂಲಕ ಐದನೇ ಆವೃತ್ತಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದು ಸೋಲು ಮತ್ತು ಒಂದು ಡ್ರಾದೊಂದಿಗೆ ಪಾಯಿಂಟ್ ಪಟ್ಟಿಯ ಕೊನೆಯಲ್ಲೇ ಉಳಿಯಿತು. ಮುಂಬೈ ತಂಡ ಆರು ಪಂದ್ಯಗಳಲ್ಲಿ ಮೂರನೇ ಜಯ ಗಳಿಸಿತು. ಪಾಯಿಂಟ್ ಪಟ್ಟಿಯಲ್ಲಿ ತಂಡ ಐದನೇ ಸ್ಥಾನದಲ್ಲಿದೆ.

ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಮುಂಬೈಗೆ ನಾಲ್ಕನೇ ನಿಮಿಷದಲ್ಲಿ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೆ ಪೌಲೊ ಮಚಾದೊ ಒದ್ದ ಚೆಂಡನ್ನು ನಿಯಂತ್ರಿಸಿ ಗುರಿ ಮುಟ್ಟಿಸಲು ಅರ್ನಾಲ್ಡೊ ಇಸಾಕೊ ವಿಫಲರಾದರು. 18ನೇ ನಿಮಿಷದಲ್ಲಿ ಚೆನ್ನೈಯಿನ್‌ಗೂ ಫ್ರೀ ಕಿಕ್ ಅವಕಾಶ ಲಭಿಸಿತು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಆ್ಯಂಡ್ರಿಯಾ ವಿಫಲರಾದರು.

20ನೇ ನಿಮಿಷದಲ್ಲಿ ಮೌಡೊ ಸೊಗೊಡೊ ಗೋಲು ಗಳಿಸಿ ಮುಂಬೈ ಸಿಟಿಗೆ ಮುನ್ನಡೆ ತಂದುಕೊಟ್ಟರು. ನಂತರ ಚೆನ್ನೈಯಿನ್‌ ನಡೆಸಿದ ಪ್ರಯತ್ನವೆಲ್ಲವೂ ವ್ಯರ್ಥವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !